‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆ !

Kannada News

26-07-2017

ಬೆಂಗಳೂರು: ಭಾರತೀಯ ಯೋಧರು, ಪಾಕಿಸ್ತಾನವನ್ನು ಕಾರ್ಗಿಲ್ ಯುದ್ಧದಲ್ಲಿ ಮಣ್ಣುಮುಕ್ಕಿಸಿ, ವಿಜಯ ಸಾಧಿಸಿದ ಸ್ಮರಣಾರ್ಥವಾಗಿ, ಇಂದು ದೇಶದೆಲ್ಲೆಡೆ ‘ಕಾರ್ಗಿಲ್ ವಿಜಯ್ ದಿವಸ್’ ಆಚರಿಸಲಾಗುತ್ತಿದೆ. ಭಾರತೀಯ ಸೈನಿಕರ ಸಾಹಸವನ್ನು ಇಡೀ ದೇಶ ಕೊಂಡಾಡುತ್ತಿದೆ. ಇದು ಭಾರತೀಯ ಸೈನ್ಯದ ಶೌರ್ಯದ ಸಂಕೇತವು ಆಗಿದೆ. ಹೀಗಾಗಿ ಪ್ರತೀ ವರ್ಷ ಜುಲೈ 26ರ ರಂದು 'ಕಾರ್ಗಿಲ್ ವಿಜಯ್ ದಿವಸ್' ಆಚರಿಸಲಾಗುತ್ತಿದೆ. ಇನ್ನು ನಗರದ ಇಂದಿರಾಗಾಂಧಿ ಸಂಗೀತಾ ಕಾರಂಜಿ ಪಾರ್ಕ್ ಬಳಿ ಇರುವ, ರಾಷ್ಟ್ರೀಯ ಸೈನಿಕ‌ ಸ್ಮಾರಕಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಸಂದೀಪ್ ಉನ್ನಿಕೃಷ್ಣನ್ ಪೋಷಕರು ಸೇರಿದಂತೆ, ವೀರ ಯೋಧರ ಪೋಷಕರು ಹಾಗೂ ವಿವಿಧ ಸೇನಾ ವಿಭಾಗದ ಅಧಿಕಾರಿಗಳಿಂದ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು. ಅಲ್ಲದೇ ಧಾರವಾಡದಲ್ಲೂ' ಕಾರ್ಗಿಲ್ ವಿಜಯ್ ದಿವಸ್' ಆಚರಣೆಮಾಡಿದ್ದೂ, ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಾರ್ಗಿಲ್ ಸ್ಥೂಪಕ್ಕೆ ಗೌರವ ವಂದನೆ ಸಲ್ಲಿಸಿದರು. ನಿವೃತ್ತ ಸೈನಿಕರು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳೂ, ಗೌರವ ನಮನ ಸಲ್ಲಿಸಿದ್ದೂ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಜಿಲ್ಲಾಧಿಕಾರಿ ಗೌರವ ಸೂಚಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ