ಆಟೋ ಮೇಲೆ ಉರುಳಿ ಬಿದ್ದ ಮರದ ರೆಂಬೆ !

Kannada News

26-07-2017

ಬೆಂಗಳೂರು: ಬೃಹದಾಕಾರದ ಮರದ ಕೊಂಬೆಯೊಂದು ಆಟೋ ಮತ್ತು ಬೈಕ್ ಮೇಲೆ ಬಿದ್ದ ಪರಿಣಾಮ, ಆಟೋದಲ್ಲಿದ್ದ ಬಾಲಕಿ ಮತ್ತು ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ, ಬೆಂಗಳೂರಿನ ಕಾವೇರಿ ಜಂಕ್ಷನ್‌ ಬಳಿ ನಡೆದಿದೆ.‌ ನಿನ್ನೆ ರಾತ್ರಿ ಅಬ್ದುಲ್ ಅಜೀಮ್, ಮುಂಬೈನಿಂದ ಬಂದಿದ್ದ ತನ್ನ ಸಹೋದರ, ಅಬ್ದುಲ್ ನದೀಮ್ ಮತ್ತು ಆತನ ಕುಟುಂಬಸ್ಥರೊಂದಿಗೆ ಯಶವಂತಪುರದಿಂದ, ವಿಲ್ಸನ್ ಗಾರ್ಡನ್ ಗೆ ಆಟೋದಲ್ಲಿ‌ ಹೋಗುತ್ತಿದ್ದರು. ಕಾವೇರಿ ಜಂಕ್ಷನ್ ಬಳಿಯ ಕಾಫಿ ಡೇ ಸಮೀಪದಲ್ಲಿ ಹೋಗುತ್ತಿದ್ದಾಗ, ಏಕಾಏಕಿ ಬೃಹದಾಕಾರದ ಮರದ ಕೊಂಬೆ ಆಟೋ ಮೇಲೆ ಬಿದ್ದಿದೆ. ಇದರಿಂದ ಆಟೋದಲ್ಲಿದ್ದ ನದೀಮ್ ನ ಚಿಕ್ಕ ಮಗಳಾದ ಆಯೆಶಾ ತೀವ್ರವಾಗಿ ಗಾಯಗೊಂಡಿದ್ದು, ಸಾವುಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ನದೀಮ್ ರ ದೊಡ್ಡ ಮಗಳು ಆಲಿಯಾ ಮತ್ತು ಆಟೋ ಚಾಲಕ ಅಲ್ಲಾಭಕ್ಷ್ ಕೂಡ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅದೇ ಮಾರ್ಗವಾಗಿ ಸ್ಕೂಟಿಯಲ್ಲಿ ಹೋಗುತ್ತಿದ್ದ, ಸವಾರನ ಮೇಲೆಯೂ ಅದೇ ಕೊಂಬೆ ಬಿದ್ದಿದ್ದರಿಂದ, ಆತನ ಸ್ಥಿತಿಯೂ ಚಿಂತಾಜನಕವಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ‌ಘಟನೆಯಲ್ಲಿ ಆಟೊ ಮತ್ತು ಸ್ಕೂಟಿ ಜಖಂಗೊಂಡಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ