ನಾಯಿಗಳು ಕಚ್ಚಿ ನವಜಾತ ಶಿಶು ಸಾವು !

Kannada News

26-07-2017

ಮಂಡ್ಯ: ಆಸ್ಪತ್ರೆ ಆವರಣದಲ್ಲಿ ನವಜಾತ ಹೆಣ್ಣು ಶಿಶುವನ್ನು, ನಾಯಿಗಳು ಕಚ್ಚಿದ ಪರಿಣಾಮ, ಶಿಶು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮಿಮ್ಸ್ ಆಸ್ಪತ್ರೆ ಆವರಣದಲ್ಲಿರುವ, ಬ್ಲಡ್ ಬ್ಯಾಂಕ್ ಪಕ್ಕ ಶಿಶು ಪತ್ತೆಯಾಗಿದೆ. ಇಂದು ಬೆಳಿಗ್ಗೆ ಆಸ್ಪತ್ರೆ ಆವರಣದಲ್ಲಿ ಬಿದ್ದಿದ್ದ ಮಗುವನ್ನು ನಾಯಿಗಳು ಕಚ್ಚಿ ಎಳೆದಾಡುತ್ತಿದ್ದಾಗ, ಇದನ್ನು ಗಮನಿಸಿದ ಸಾರ್ವಜನಿಕರು, ತಕ್ಷಣ ಆಸ್ಪತ್ರೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಅವರೇ ರಕ್ಚಣೆಗೆ ಮುಂದಾಗಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತೂ. ಆದರೆ, ಅಷ್ಟರಲ್ಲಾಗಲೇ ಶಿಶು ಮೃತಪಟ್ಟಿತ್ತು. ತಕ್ಷಣ ಆಸ್ಪತ್ರೆಯ ಎಲ್ಲ ವಾರ್ಡ್‌ಗಳನ್ನು ಪರಿಶೀಲಿಸಿದ ಸಿಬ್ಬಂದಿ, ಆಸ್ಪತ್ರೆಯಲ್ಲಿ ಯಾವುದೇ ಮಗು ಮಿಸ್ ಆಗಿಲ್ಲವೆಂದು ಹೇಳುತ್ತಿದೆ. ಅಲ್ಲದೇ ನಿನ್ನೆ ಆಸ್ಪತ್ರೆಯಲ್ಲಿ ಯಾವುದೇ ಮಗು ಡೆತ್ ಆಗಿಲ್ಲ. ಹೀಗಾಗಿ ಹೊರಗಿನಿಂದ ತಂದು ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅದೇನೆ ಇರಲಿ, ನಿರ್ಲಕ್ಷ್ಯ ಯಾರದೇ ಇರಲಿ ನವಜಾತ ಶಿಶುವೊಂದು ಸಾವನ್ನಪ್ಪಿರುವುದು ದುರದೃಷ್ಟವೇ ಸರಿ.                         ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ