ರಾಜ್ಯದ ಮತದಾರರಿಗೆ ಸಿಎಂ ಎಚ್ಚರಿಕೆ..?

Kannada News

25-07-2017

ಬೆಂಗಳೂರು: ಜೆಡಿಎಸ್ ಪಕ್ಷದವರು ಡೋಂಗಿ ಜಾತ್ಯಾತೀತ ವಾದಿಗಳು. ಅವರಿಗೆ ಮಣೆ ಹಾಕಬೇಡಿ. ಒಂದು ವೇಳೆ ಅವರನ್ನು ಬೆಂಬಲಿಸಿದರೆ, ಪರೋಕ್ಷವಾಗಿ ಕೋಮುವಾದಿ ಶಕ್ತಿಗಳನ್ನು ಬೆಂಬಲಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯದ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಸರ್ವಜ್ಞ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎಂದೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಆದರೂ ಕೆಲ ಸೀಟುಗಳನ್ನು ಗಿಟ್ಟಿಸಿ ಸಮ್ಮಿಶ್ರ ಸರ್ಕಾರ ರಚಿಸಲು ನೆರವಾಗಬಹುದಷ್ಟೆ, ಅವರು ಅವಕಾಶವಾದಿಗಳು ಎಂದು ಹೇಳಿದರು.

ಬಿಜೆಪಿ ಪಕ್ಷದವರು ಕೋಮುವಾದಿಗಳು. ಗಲಭೆ ಸೃಷ್ಟಿಸುವಲ್ಲಿ ಅವರು ನಿಸ್ಸೀಮರು. ಹಾಗಾಗಿ ಜೆಡಿಎಸ್ ಬೆಂಬಲಿಸಿದರೆ, ಕೋಮುವಾದಿಗಳನ್ನು ಅಧಿಕಾರಕ್ಕೆ ತಂದಂತೆ ಎಂದು ಅವರು ಹೇಳಿದರು. ಡಾ. ರಾಜ್ ಕುಮಾರ್ ಅವರು ಎಲ್ಲರನ್ನೂ ಅಭಿಮಾನಿಗಳೇ ದೇವರು ಎನ್ನುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಅವರನ್ನು ಅಭಿಮಾನಿ ದೇವರುಗಳು ಎಂದು ಸಿದ್ದರಾಮಯ್ಯ ಹೇಳಿದರು. ಮುಂಬರುವ ಚುನಾವಣೆಯಲ್ಲಿ ಸರ್ಕಾರಕ್ಕೆ ಹಾಗೂ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ