ತೃತೀಯ ಲಿಂಗಿಗಳಿಂದ ಲೈಂಗಿಕ ಕಿರುಕುಳ !

Kannada News

25-07-2017

ಬೆಂಗಳೂರು: ಹೆಬ್ಬಾಳದ ಬಳಿ ಊರಿಗೆ ಹೋಗಲು ಬಸ್‍ಗಾಗಿ ಕಾಯುತ್ತಿದ್ದ ಯುವಕನ ಮೊಬೈಲ್ ಕಸಿದು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ತೃತೀಯ ಲಿಂಗಿಗಳು ಪರಾರಿಯಾಗಿರುವ ಘಟನೆ ತಡ ರಾತ್ರಿ ನಡೆದಿದೆ. ಹೆಬ್ಬಾಳದ ಫ್ಲೈಓವರ್ ಬಳಿ, ದೊಡ್ಡಬಳ್ಳಾಪುರ ಮೂಲದ ಕಿಶೋರ್ (ಹೆಸರು ಬದಲಾಯಿಸಿದೆ) ಎನ್ನುವ ಯುವಕ ರಾತ್ರಿ 11 ಗಂಟೆ ವೇಳೆಯಲ್ಲಿ ಊರಿಗೆ ಹೋಗಲು ಬಸ್‍ಗಾಗಿ ಕಾಯುತ್ತಿದ್ದಾಗ, ಅಲ್ಲಿಗೆ ಬಂದ ಮೂವರು ತೃತೀಯ ಲಿಂಗಿಗಳು ಕಿಶೋರ್ ಬಳಿ ಹಣ ಕೇಳಿದ್ದು ಹಣ ಕೊಡಲು ನಿರಾಕರಿಸಿದಾಗ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಮೊಬೈಲ್ ಕಸಿದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ. ರಕ್ಷಣೆಗಾಗಿ ಕೂಗಿಕೊಂಡು ಅವರಿಂದ ತಪ್ಪಿಸಿಕೊಂಡು ಬಂದು ಕಿಶೋರ್ ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ