ಮಹಿಳೆ ಮೇಲೆ ನಾಯಿಗಳ ದಾಳಿ !

Kannada News

25-07-2017

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಇಂದು ಕುರುಬರ ಹಳ್ಳಿಯ ಕಾವೇರಿನಗರದ ಶಾಲೆಯ ಮುಂದೆಯೇ, ಮಹಿಳೆ ಮೇಲೆ 5 ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಕಾವೇರಿನಗರದ ಸೇಂಟ್ ಮೇರಿಸ್ ಪ್ರೌಢಶಾಲೆ ಬಳಿ, ಕುರುಬರ ಹಳ್ಳಿಯ ನಿವಾಸಿಯಾದ ಪದ್ಮಾ ಎಂಬವರು, ಬೆಳಿಗ್ಗೆ ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ನಾಯಿಗಳು ದಾಳಿ ನಡೆಸಿದ್ದು, ಪದ್ಮಾ ಅವರ ಕಾಲಿಗೆ ತೀವ್ರ ಗಾಯಗಳಾಗಿವೆ. ಸೇಂಟ್ ಮೇರಿಸ್ ಪ್ರೌಡಶಾಲೆಯ ಮುಂದೆ, ಸದಾ ನಾಯಿಗಳ ಹಾವಳಿ ಹೆಚ್ಚಿದ್ದು, ಶಾಲೆ ಮಕ್ಕಳು ಭಯದಿಂದಲೇ, ಓಡಾಡುತ್ತಿದ್ದಾರೆ. ನಾಯಿಗಳ ಹಾವಳಿ ಹಿನ್ನೆಲೆ ಬಿಬಿಎಂಪಿಗೆ ದೂರು ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ