ಬಸ್ ಡಿಕ್ಕಿ ಸೈಕಲ್ ಸವಾರ ಸಾವು !

Kannada News

25-07-2017

ಬೆಂಗಳೂರು: ನಗರದ ದೇವನಹಳ್ಳಿ ಬಳಿಯ ವಿಜಯಪುರ ಬಸ್ ನಿಲ್ದಾಣದ ಸಮೀಪ, ಮಂಗಳವಾರ ಬೆಳಿಗ್ಗೆ ವೇಗವಾಗಿ ಬಂದ ಕೆ.ಎಸ್‍.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಜಯಪುರದ  ಮುನಿಯಪ್ಪ (65) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುನಿಯಪ್ಪ ನೀಲಿಗಿರಿ ತೋಪುಗಳಲ್ಲಿ ಸೌದೆ ಆಯ್ದುಕೊಂಡು ವ್ಯಾಪಾರ ಮಾಡುತ್ತಿದ್ದರು. ಬೆಳಿಗ್ಗೆ ಸಹ ಎಂದಿನಂತೆ ಸೌದೆ ಸಂಗ್ರಹಿಸಲು ಹೊರಟಿದ್ದರು. ಈ ವೇಳೆ ಶಿಡ್ಲಘಟ್ಟದಿಂದ ಬೆಂಗಳೂರು ಕಡೆ ಹೊರಟಿದ್ದ ಸರ್ಕಾರಿ ಬಸ್, ಸೈಕಲ್ ಸವಾರನ ಮೇಲೆ ಹರಿದಿದೆ. ಪರಿಣಾಮ ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಕೆ.ಎಸ್.ಆರ್.ಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ