ಕೆಇಬಿಗೆ ಬೀಗ ಜಡಿದು ಪ್ರತಿಭಟನೆ !

Kannada News

25-07-2017

ವಿಜಯಪುರ: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೇಸತ್ತ ಜನರು, ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ, ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲ ಪಟ್ಟಣದ ವಾರ್ಡ್ ನ ಜನರೇ ಕೆಇಬಿ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದ ೧೭,೧೮,೧೯ ವಾರ್ಡ್ ಗಳಿಗೆ ಕೆಇಬಿ ಅಧಿಕಾರಿಗಳು ಕಳೆದ ಒಂದು ತಿಂಳಿನಿಂದ ಸಮಪ೯ಕವಾಗಿ ವಿದ್ಯುತ ಪೂರೈಸುತ್ತಿಲ್ಲ, ಎಂದು ಆರೋಪಿಸಿದ ಗ್ರಾಮಸ್ಥರು, ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ, ಕೆಇಬಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು. ಇನ್ನು ಪ್ರತಿಭಟನೆ ತೀವ್ರ ಗೊಳ್ಳುತ್ತಿದ್ದಂತೆ, ಘಟನಾ ಸ್ಥಳಕ್ಕೆ ಶಾಖಾಧಿಕಾರಿ ದತ್ತಾತ್ರಯ ಗುಡ್ಡಳ್ಳಿ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನುಮುಂದೆ ಈ ಭಾಗಕ್ಕೆ ಸರಿಯಾಗಿ ವಿದ್ಯುತ್ ಒದಗಿಸಲಾಗುವದು ಎಂಬ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಈ ಸಂದಭ೯ದಲ್ಲಿ ಮುಖಂಡರಾದ ವೀರಭದ್ರ ಕತ್ತಿ, ಬಾಬು ಕೋತಂಬರಿ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.                       ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ