ಪ್ರತೀಕಾರಕ್ಕೆ ಪಣ ತೊಟ್ಟವನು ಹೆಣವಾದ !

Kannada News

25-07-2017

ಮಂಗಳೂರು: ಭೂಗತ ಪಾತಕಿಯ, ಮಗನಾಗಿದ್ದ ರೌಡಿಶೀಟರ್ ನನ್ನು, ನಾಲ್ವರ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ, ಕೊಲೆ ಮಾಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ರೌಡಿಶೀಟರ್ ಪವನ್ ರಾಜ್ ಶೆಟ್ಟಿ(20) ಕೊಲೆಯಾದ ರೌಡಿ. ಮಂಗಳೂರಿನ ಹೊರವಲಯದಲ್ಲಿ ಹತ್ಯೆ ನಡೆದಿದೆ. ಕೊಲೆ ಪಾತಕಿಯಾಗಿದ್ದ ವಾಮಂಜೂರು ರೋಹಿಯ ಮಗ, ಪವನ್ ರಾಜ್ ಶೆಟ್ಟಿಯಾಗಿದ್ದಾನೆ. ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಪವನ್, ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ. 2009 ರಲ್ಲಿ ಪವನ್ ರಾಜ್ ನ ತಂದೆಯನ್ನು ಕೊಲೆ ಮಾಡಲಾಗಿತ್ತು. ತಂದೆಯ ಸಾವಿನ ಪ್ರತೀಕಾರಕ್ಕೆ ಮುಂದಾಗಿದ್ದ ಪವನ್, ಕೊಲೆಗೆ ಸಂಚು ರೂಪಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಜೈಲಿನಿಂದ ಹೊರ ಬಂದವನೇ, ತನ್ನ ಹಳೇ ದ್ವೇಷಸಾಧಿಸಲು ಮುಂದಾಗಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದ. ಇಷ್ಟರಲ್ಲಾಗಲೇ, ಮಂಗಳೂರಿನ ಅಮೃತನಗರದ ಕುಟ್ಟಿಪಲ್ಕೆ ಎಂಬಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದೂ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ