ಬಿಬಿಎಂಪಿ: ಫಲಾನುಭವಿಗಳಿಗೆ ಸೌಲಭ್ಯ ವಿತರಣೆ !

Kannada News

25-07-2017

ಬೆಂಗಳೂರು: ಬಿಬಿಎಂಪಿ ವತಿಯಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ, ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ನಗರಾಭಿವೃದ್ದಿ ಸಚಿವ ಜಾರ್ಜ್, ಮೇಯರ್ ಪದ್ಮಾವತಿ ಭಾಗಿಯಾಗಿದ್ದರು. ಸುಮಾರು 892 ನಿರುದ್ಯೋಗಿಗಳಿಗೆ ಸ್ವಾವಲಂಬನೆ ಯೋಜನೆಯಡಿ, ಕಾರುಗಳ ವಿತರಣೆ ಮಾಡಿದ್ದೂ, 665 ಜನರಿಗೆ ಸಾರಥಿ ಯೋಜನೆಯಡಿ ಆಟೋರಿಕ್ಷಾ ವಿತರಣೆ ಮಾಡಲಾಯಿತು. ಇನ್ನು 285 ವಿಕಲಚೇತನರಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ದ್ವಿಚಕ್ರ ಮೋಟಾರ್ ವಾಹನಗಳ ವಿತರಣೆ ಮಾಡಿದ್ದಾರೆ.  ಒಟ್ಟು 4ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಾರ್ಜ್ ಅವರು, ಸಿಎಂ ಸಿದ್ದರಾಮಯ್ಯ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅಂಬೇಡ್ಕರ್ ರೀತಿ ಜನ ಪರ ಯೋಜನೆ ತಂದವರು ಸಿಎಂ. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಅನೇಕ ಐತಿಹಾಸಿಕ ಯೋಜನೆ ತಂದಿದ್ದಾರೆ. ರೈತರ ಸಾಲ ಮನ್ನಾ ಮಾಡಿ ವಿಪಕ್ಷಗಳ ಬಾಯಿ ಮುಚ್ಚಿಸಿದ್ದು ಸಿದ್ದರಾಮಯ್ಯ ಎಂದು, ಸಿಎಂ ರನ್ನು ಹಾಡಿ ಹೊಗಳಿದ್ದಾರೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಬಿಜೆಪಿ ನಾಯಕರು ಕೇಂದ್ರಕ್ಕೆ ಒತ್ತಾಯ ಮಾಡಬೇಕು, ಎಂದು ಆಗ್ರಹಿಸಿದರು. ನುಡಿದಂತೆ ನಡೆಯುತ್ತಿರುವ ಏಕೈಕ ಮುಖ್ಯಮಂತ್ರಿ ಅಂದ್ರೆ ಸಿದ್ದರಾಮಯ್ಯ ಎಂದರು.  ಬೆಂಗಳೂರು ಸಿಎಂ ಅಭಿವೃದ್ದಿಗೆ ಹೆಚ್ಚು ಅನುದಾನ ನೀಡಿದ್ದಾರೆ. ಇಡೀ ಬೆಂಗಳೂರು ಜನ ನಿಮ್ಮ ಜೊತೆ ಇದ್ದಾರೆ. ಮುಂದಿನ ಅವಧಿಗೂ ನೀವೇ ಮುಖ್ಯಮಂತ್ರಿ ಆಗ್ತೀರಾ ಎಂದು ಕಾರ್ಯಕ್ರಮದಲ್ಲಿ  ಜಾರ್ಜ್ ಅವರು ಹೇಳಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ