ಮೈಸೂರು ಮೃಗಾಲಯದಲ್ಲಿ ಸಂಭ್ರಮ !

Kannada News

25-07-2017

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂತಸ ಮನೆಮಾಡಿದೆ ಇದಕ್ಕೆ ಕಾರಣ, ಮೃಗಾಲಯದಲ್ಲಿರುವ ಆನೆ ಹಾಗೂ ನೀರು ಕುದುರೆ, ಮರಿಗಳಿಗೆ ಜನ್ಮ ನೀಡಿವೆ. ಅಭಿ-ಐರಾವತಿ ಆನೆ ಜೋಡಿಗೆ ಹೆಣ್ಣು ಮರಿ ಜನನವಾಗಿದ್ದರೆ,  ಸೂರಜ್ ಹಾಗೂ ಸೌಂದರ್ಯ ನೀರು ಕುದುರೆ ಜೋಡಿಗೂ ಮರಿ ಜನಿಸಿದೆ. ನೀರು ಕುದುರೆ ಮರಿಯ ಲಿಂಗ ಸದ್ಯಕ್ಕೆ ಪತ್ತೆಯಾಗಿಲ್ಲ. ಎರಡು ಪ್ರಾಣಿಗಳ ಮರಿಗಳ ಜನನದಿಂದ, ಮೃಗಾಲಯ ಸಂಭ್ರಮದಲ್ಲಿದೆ. ಸಾರ್ವಜನಿಕರ ವೀಕ್ಷಣೆಗೂ ನೂತನ ಮರಿಗಳು ಲಭ್ಯವಾಗಿದ್ದೂ, ಮರಿಗಳು ನೋಡುಗರನ್ನು ಸಂತೋಷಗೊಳಿಸುತ್ತಿವೆ. ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ