ರೈಲ್ವೆ ನೌಕರಿ ಆಮಿಷ: ಲಕ್ಷಾಂತರ ಪಂಗನಾಮ !

Kannada News

25-07-2017

ಹುಬ್ಬಳ್ಳಿ: ಕೇಂದ್ರ ಸರ್ಕಾರಿ ನೌಕರಿ ಆಮಿಷ  ತೋರಿಸಿ, ವಂಚಿಸಿದ ನಾಲ್ವರನ್ನು ಹುಬ್ಬಳ್ಳಿಯಲ್ಲಿ ರೈಲ್ವೆ  ಪೊಲೀಸರು ಬಂಧಿಸಿದ್ದಾರೆ‌. ಮೈಸೂರು ಮೂಲದ 10 ಯುವಕರಿಂದ ತಲಾ ಮೂರು ಲಕ್ಷ ಪಡೆದು ಹುಬ್ಬಳ್ಳಿಯಲ್ಲಿ, ನಕಲಿ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದ ರೈಲ್ವೆ ನೌಕರ ಸೇರಿ ನಾಲ್ವರನ್ನು, ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗದ ರೈಲ್ವೆ ವಾಣಿಜ್ಯ ಸಹಾಯಕ ಆನಂದ ಪಿ.ಎಸ್., ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮನೋಹರ ಎಸ್.ವಿ., ಚಾಮರಾಜನಗರದ ಸಚಿನ್ ಹಾಗೂ ಹುಬ್ಬಳ್ಳಿ ರೈಲ್ವೆ ಆಸ್ಪತ್ರೆ ಸಫಾಯಿ ಕರ್ಮಚಾರಿ ರಮೇಶ ಬಂಧಿತರು. ಮೈಸೂರು, ಹಾಸನ, ಸುಬ್ರಹ್ಮಣ್ಯ, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ಯುವಕ ಸೇರಿ 10 ಯುವಕರು ವಂಚನೆಗೊಳಗಾಗಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ತನಗೆ ಮೇಲಧಿಕಾರಿಗಳು ಗೊತ್ತು, ನಿಮಗೆ `ಡಿ' ದರ್ಜೆ ನೌಕರಿ ಕೊಡಿಸುತ್ತೇನೆ ಎಂದು ಆನಂದ ಯುವಕರನ್ನು ನಂಬಿಸಿದ್ದ. 2013 ರಲ್ಲೇ 10 ಯುವಕರಿಂದ ತಲಾ 3 ಲಕ್ಷ ರೂ.ನಂತೆ 30 ಲಕ್ಷ ಪಡೆದುಕೊಂಡಿದ್ದ. ನಂತರ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಸೇರಿದಂತೆ ಹಲವು ನಕಲಿ ಸಂದರ್ಶನ ಹಂತ ಪೂರೈಸಿ ಯುವಕರಲ್ಲಿ ನಂಬಿಕೆ ಬರುವಂತೆ ಮಾಡಿದ್ದ.

ಬೆಂಗಳೂರಿನಲ್ಲಿ ಎಂಟೆಕ್ ಪದವಿ ಪಡೆದಿರುವ ಮನೋಹರ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಪ್ರವೇಶ ಪತ್ರ, ವೈದ್ಯಕೀಯ ಪತ್ರ, ಆರ್ಡರ್ ಕಾಪಿ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆನಂದನಿಗೆ ಸಹಕರಿಸುತ್ತಿದ್ದ. ಜೊತೆಗೆ ಆತನ ಸಹೋದರ ಪ್ರಿಯಕರನನ್ನೂ ಕರೆತಂದಿದ್ದ. ಹಣ ನೀಡಿದ ಯುವಕರಿಗೆ ಅನುಮಾನ ಬಾರದಂತೆ ನಟಿಸುತ್ತಿದ್ದ, ನೈಋತ್ಯ ರೈಲ್ವೆ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿ ನಿನ್ನೆ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಯುವಕರಿಗೆ ತಿಳಿಸಿದ್ದರು. ಭಾನುವಾರವೇ ಹುಬ್ಬಳ್ಳಿಗೆ ಆಗಮಿಸಿದ್ದ ಯುವಕರನ್ನು ಕೈಲಾಶ್ ಲಾಡ್ಜ್ ‍ನಲ್ಲಿ ಉಳಿಸಿ, ತಾವು ಇನ್ನೊಂದು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ರೈಲ್ವೆ ಆಸ್ಪತ್ರೆಯ ಒಂದು ಕೋಣೆಯಲ್ಲಿ ನಕಲಿ ವೈದ್ಯಕೀಯ ತಪಾಸಣೆ ಏರ್ಪಾಟು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಆರ್ ಪಿ ಎಫ್ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳಿಗೆ ರೈಲ್ವೆ ಆಸ್ಪತ್ರೆಯಲ್ಲೇ ನಕಲಿ ವೈದ್ಯಕೀಯ ಪರೀಕ್ಷೆ ಮಾಡಿಸುವಷ್ಟು ಧೈರ್ಯ ಇದೆ ಎಂದರೆ, ಪ್ರಕರಣದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಕರಣದಲ್ಲಿ ಇನ್ನೂ ಹಲವರು ವಂಚನೆಗೀಡಾಗಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಈನಡುವೆ ಬಂಧಿತ ನಾಲ್ವರು ಆರೋಪಗಳನ್ನು ಹೆಚ್ಚಿನ ತನಿಖೆಗಾಗಿ ಕೇಶ್ವಾಪೂರ ಪೊಲೀಸ್ ರಿಗೆ ರೈಲ್ವೆ  ಪೊಲೀಸರು ಆರೋಪಿಗಳನ್ನು ಒಪ್ಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Breaking news
  • HANUMANTHEGOWDA A B
  • Station Masters DEAR