ನಿಜವಾಗಲೂ ಕಚ್ಚಿದ್ದು ಯಾರು..?

Kannada News

24-07-2017

ಪ್ರಥಮ್‌ನ ಹುಚ್ಚಾಟಕ್ಕೆ, ಅತಿರೇಕದ ವರ್ತನೆ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುವುದು ಸೂಪರ್ ಸುದ್ದಿ ಓದುಗರ ಗಮನಕ್ಕೆ ಬಂದಿದೆ. ತಳಮಟ್ಟಕ್ಕೆ ಕುಸಿದಿರುವ ಸಂಜು ಮತ್ತು ನಾನು ಸೀರಿಯಲ್‌ನ ಟಿಆರ್‌ಪಿಯನ್ನು ಏರಿಸುವ ಬಗ್ಗೆ ತಲೆಕೆಡಿಸಿಕೊಂಡಿದ್ದ ಚಾನೆಲ್‌ನ ಬಾಸ್‌ಗಳು, ಈಗ ಪ್ರಥಮ್ ಮೂಲಕವೇ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆಯೇ ಎಂದು ಅನುಮಾನಿಸಲಾಗುತ್ತಿದೆ. ಸಂಜು ಮತ್ತು ನಾನು ಸೀರಿಯಲ್‌ನ ಸೆಟ್ಟಿನಲ್ಲಿ, ಒಂದಷ್ಟು ಮಾತಿಗೆ ಮಾತು ಬೆಳೆದು, ಅದು ಭುವನ್ ಮತ್ತು ಪ್ರಥಮ್ ಮಧ್ಯೆ ಜಗಳಕ್ಕೆ ತಿರುಗಿ ಪ್ರಥಮ್, ಭುವನ್‌ನ ತೊಡೆ ಕಚ್ಚುವಲ್ಲಿ ಅಂತ್ಯಗೊಂಡಿದ್ದು, ಈ ಘಟನೆ ಕಲರ್ಸ್ ಚಾನೆಲ್ ನ ಮಂದಿಗೆ ಬಹಳಷ್ಟು ಖುಷಿ ಕೊಟ್ಟಂತಿದೆ.

ಜನಪ್ರಿಯತೆ ಕಡಿಮೆಯಾಗಿ ವೀಕ್ಷಕರ ಮನದಲ್ಲಿ ಮೂಲೆಗೆ ತಳ್ಳಲ್ಪಟ್ಟಿದ್ದ ಸಂಜು ಮತ್ತು ನಾನು, ಈ ಘಟನೆಯ ಮೂಲಕ ಮತ್ತೊಮ್ಮೆ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ. ‘ಈ’ ಟಿವಿ ನ್ಯೂಸ್ ಅಂತೂ ಭಾರತ-ಪಾಕ್ ಯುದ್ಧ ಎಂಬ ರೀತಿಯಲ್ಲಿ ಅದಕ್ಕೆ ಪ್ರಚಾರ ಕೊಟ್ಟು ವರದಿ ಮಾಡಿದ್ದು, ಮತ್ತು ಇತರ ಚಾನೆಲ್ ಗಳು ಬೆಳಗಿನಿಂದ ರಾತ್ರಿ ತನಕ ಆ ವಿಷಯವನ್ನೇ ಮಾತನಾಡಿ ಸಂಜು ಮತ್ತು ನಾನು ಸೀರಿಯಲ್‌ಗೆ ಒಂದಷ್ಟು ಆಕರ್ಷಣೆಯನ್ನು ಮತ್ತೆ ತಂದುಕೊಟ್ಟಂತಿದೆ. ಅದೂ ಅಲ್ಲಿಇಲ್ಲಿ ಕಚ್ಚಿಲ್ಲ, ತೊಡೆಗೇ ಕಚ್ಚಿದ್ದು ಎಂದು ಮುದ್ದು ಮುದ್ದಾಗಿ ಅಲವತ್ತುಕೊಂಡ ಭುವನ್ ಮತ್ತು ಅದರೊಂದಿಗೆ ಪ್ರಥಮ್ ಕಚ್ಚಿದ್ದೇ ಸರಿ ಎಂದು ಹೇಳುವ ಆತನ ಬಾಲಂಗೋಚಿಗಳು, ಇದರ ಬಗ್ಗೆ ಭುವನ್ ಠಾಣೆ ಏರಿರುವ ವಿಚಾರ ಏನಾಯಿತೆಂಬುದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ನಾನು ಕಚ್ಚಿಲ್ಲ, ಸೆಟ್ ನಲ್ಲಿ ಯಾವುದೋ ನಾಯಿ ಕಚ್ಚಿರಬಹುದೆಂದು ಹೇಳುವ ಪ್ರಥಮ್, ಭುವನ್ ಕಚ್ಚಿಸಿಕೊಂಡಿರುವುದಂತೂ ನಿಜವೆಂದು ದೃಢಪಡಿಸಿಯಾಗಿದೆ. ಆದರೆ ಭುವನ್ ಕಚ್ಚಿಸಿಕೊಂಡಿದ್ದು ಯಾರಿಂದ ಮತ್ತು ಯಾತಕ್ಕಾಗಿ ಎಂಬುದು ಜುಲೈ24ರ ಸಂಜು ಮತ್ತು ನಾನು ಸಂಚಿಕೆಯ ಟಿಆರ್‌ಪಿ ನೋಡಿದರೆ ಗೊತ್ತಾಗುತ್ತದೆ. ಆದರೂ ಕೊಡಗಿನ ವೀರ ಎಂಬಂತೆ ಬಣ್ಣಿಸಲ್ಪಟ್ಟ ಭುವನ್ ಒಂದು ಯಕಃಶ್ಚಿತ್ ನಾಯಿಯಿಂದಲೋ ಅಥವಾ ಪ್ರಥಮ್ ನಿಂದಲೋ ಕಚ್ಚಿಸಿಕೊಂಡಿದ್ದು ಮಾತ್ರ ಆತನ ಕೆಲವೇ ಅಭಿಮಾನಿಗಳು ಬೇಸರ ಪಡುವಂತೆ ಮಾಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ