ವಿವಾಹವಾಗಿಲ್ಲವೆಂದು ಆತ್ಮಹತ್ಯೆ !

Kannada News

24-07-2017

ಬೆಂಗಳೂರು: ಮದುವೆಯಾಗದಿದ್ದರಿಂದ ನೊಂದ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ವಿಜಯನಗರದ, ಸರಸ್ವತಿ ನಗರದಲ್ಲಿ ನಡೆದಿದೆ. ಸರಸ್ವತಿ ನಗರದ 5ನೇ ಕ್ರಾಸ್‍ನ ಶಿವಕುಮಾರ್ (50) ಆತ್ಮಹತ್ಯೆಗೆ ಶರಣಾದವರು. ವಿವಾಹವಾಗದಿದ್ದರಿಂದ ನೊಂದಿದ್ದ ಶಿವಕುಮಾರ್ ಕುಡಿತದ ಚಟ ಅಂಟಿಸಿಕೊಂಡಿದ್ದರು. ಮನೆಯಲ್ಲೇ ಮದ್ಯಪಾನ ಮಾಡಿಕೊಂಡು ಕಾಲಕಳೆಯುತ್ತಿದ್ದ ಶಿವಕುಮಾರ್, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ