ಕಸಾಯಿಖಾನೆ ಪಾಲಾಗುತ್ತಿದ್ದ ಗೋವುಗಳ ರಕ್ಷಣೆ !

Kannada News

24-07-2017

ಬೆಂಗಳೂರು: ಕಸಾಯಿ ಖಾನೆಗೆ ಸಾಗಿಸುತ್ತಿದ್ದ 14 ಹಸುಗಳನ್ನು ರಕ್ಷಿಸಿರುವ ಆರ್‍ಎಂಸಿಯಾರ್ಡ್ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ದಾವಣಗೆರೆಯಿಂದ ಟೆಂಪೋವೊಂದರಲ್ಲಿ ಶಿವಾಜಿನಗರದ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದಾಗ, ಆರ್‍ಎಂಸಿಯಾರ್ಡ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಟೆಂಪೋವನ್ನು ವಶಪಡಿಸಿಕೊಂಡು ಹಸುಗಳನ್ನು ರಕ್ಷಿಸಿದ್ದಾರೆ. ಟೆಂಪೋ ಚಾಲಕ ಮನ್ಸೂರ್ನನ್ನು ಬಂಧಿಸಿ, ಕೃತ್ಯದಲ್ಲಿ ತೊಡಗಿದ್ದ ಬಾಬಾ ಹಾಗೂ ಅಹ್ಮದ್ವುಲ್ಲಾಗಾಗಿ ಶೋಧ ನಡೆಸಲಾಗಿದೆ. ವಶಪಡಿಸಿಕೊಂಡ ಹಸುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ