ಫೇಸ್ ಬುಕ್ ಚಾಟಿಂಗ್: ಸಂಸಾರದಲ್ಲಿ ಬಿರುಕು !

Kannada News

24-07-2017

ಬೆಂಗಳೂರು: ಯುವತಿಯರ ಜೊತೆ ಫೇಸ್ ಬುಕ್ ಚಾಟಿಂಗ್ ಮಾಡುತ್ತಿದ್ದದನ್ನು ಪ್ರಶ್ನಿಸದಕ್ಕೆ ಪತ್ನಿಯನ್ನೇ, ಪತಿಯೋರ್ವ ಮನೆಯಿಂದ ಹೊರಹಾಕಿರುವ ಘಟನೆ  ಶಿವಾಜಿ ನಗರದಲ್ಲಿ ನಡೆದಿದೆ. ಭಾಸ್ಕರ್ ವಿಕ್ಟರಿ ಎಂಬಾತನೇ ತನ್ನ ಪತ್ನಿ ಇಶಾನಿ (ಹೆಸರು ಬದಲಾಯಿಸಿದೆ)ಯನ್ನ ಮನೆಯಿಂದ ಹೊರ ಹಾಕಿದ ಪತಿ. ಭಾಸ್ಕರ್ ತನ್ನ ಗೆಳತಿಯರ ಜೊತೆ ಫೇಸ್ ಬುಕ್ ಚಾಟಿಂಗ್ ಮಾಡ್ತಾಯಿದ್ದರು. ಇದರಿಂದ ಕುಪಿತಗೊಂಡ ಇಶಾನಿ ಗಂಡನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಭಾಸ್ಕರ್ ರಾತ್ರಿಯೇ ಇಶಾನಿ ಅವರನ್ನು ಮನೆಯಿಂದ ಹೊರ ಹಾಕಿದ್ದಾನೆ. ಭಾಸ್ಕರ್ ಮತ್ತು ಇಶಾನಿ ಪ್ರೀತಿಸಿ ಮದುವೆಯಾಗಿ ಶಿವಾಜಿ ನಗರದಲ್ಲಿ ವಾಸವಾಗಿದ್ದರು. ಮನೆಯಿಂದ ಹೊರ ಬಂದ ಇಶಾನಿ ಪತಿಯ ವಿರುದ್ಧ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ