ಕತ್ತು ಹಿಸುಕಿ ಪತ್ನಿಯ ಕೊಲೆ !

Kannada News

24-07-2017

ಬೆಂಗಳೂರು: ಅನೈತಿಕ ಸಂಬಂಧ ಆರೋಪಮಾಡಿ ಜಗಳ ಮಾಡಿದ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ವಾಟದಹೊಸಹಳ್ಳಿಯ ನಾಗರಾಜು ತನ್ನ ಪತ್ನಿ ಗಾಯತ್ರಿಯನ್ನು (24) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಗುಡಿಬಂಡೆಯ ಗಾಯತ್ರಿಯನ್ನು ನಾಗರಾಜುಗೆ ವಿವಾಹಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಟಾಟಾ ಏಸ್ ಚಾಲಕನಾಗಿದ್ದ ನಾಗರಾಜು ತನ್ನ ಪತ್ನಿ ಗಾಯತ್ರಿ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಗಂಡನ ಕಾಟ ತಾಳಲಾರದೆ ಗಾಯತ್ರಿ ಕೂಡ ತವರು ಮನೆ ಸೇರಿದ್ದಳು. ಶನಿವಾರವಷ್ಟೇ ರಾಜೀ ಪಂಚಾಯಿತಿ ಮಾಡಿ ಗಾಯತ್ರಿ ಮನೆಯವರು ಗಂಡನ ಮನೆಗೆ ಕಳುಹಿಸಿದ್ದರು. ಎಂದಿನಂತೆ ರಾತ್ರಿ ಕೂಡ ಕುಡಿದು ಬಂದು ಗಾಯತ್ರಿ ಮೇಲೆ ಗಲಾಟೆ ನಡೆಸಿದ್ದ ಗಂಡ, ಈ ವೇಳೆ ಗಾಯತ್ರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ತದನಂತರ ತಾನೇ ಬಂದು ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ಶರಣಾಗಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ