ಮೃತ ವ್ಯಕ್ತಿ ಜೇಬಲ್ಲಿ ಡೆತ್ ನೋಟ್ !

Kannada News

24-07-2017

ಬೆಂಗಳೂರು: ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿ ಜಲ್ಲಿಪುಡಿ(ಎಂ ಸ್ಯಾಂಡ್)ಯನ್ನು ಟಿಪ್ಪರ್ ಲಾರಿಯಿಂದ ಸುರಿಯುವ ವೇಳೆ ಮೃತದೇಹವೊಂದು ಹೊರ ಬಂದು ಕೆಲಕಾಲ ಆತಂಕ ಸೃಷ್ಠಿಸಿತ್ತು. ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿಯು ಸುಮಾರು 35 ವರ್ಷ ವಯಸ್ಸಿನವನಾಗಿದ್ದು, ಸದ್ಯಕ್ಕೆ ಆತನ ಹೆಸರು ವಿಳಾಸ ತಿಳಿದುಬಂದಿಲ್ಲ. ಮೆಗಾ ಡೈರಿ ಕಾಮಗಾರಿಗೆ ದೇವನಹಳ್ಳಿ ತಾಲ್ಲೂಕು ಮುದ್ದನಾಯಕನಹಳ್ಳಿ ಬಳಿಯ ಮಂಜುನಾಥ ಕ್ರಷರ್ ನಿಂದ ಎಂ ಸ್ಯಾಂಡ್ ತರಸಲಾಗಿತ್ತು. ಎಂ ಸ್ಯಾಂಡ್ ತುಂಬಿಕೊಂಡು ಟಿಪ್ಪರ್ ಲಾರಿ ಮೆಗಾ ಡೈರಿಗೆ ಬಂದಿತ್ತು. ನಿರ್ಮಾಣ ಹಂತದ ಮೆಗಾ ಡೈರಿಯಲ್ಲಿ ಟಿಪ್ಪರ್ ನಿಂದ  ಎಂ ಸ್ಯಾಂಡ್ ಡಂಪ್ ಮಾಡುತ್ತಿದ್ದ ವೇಳೆ ಏಕಾಏಕಿ ಮೃತದೇಹ ಹೊರಬಂದಿದೆ. ಇದನ್ನ ಕಂಡು ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಪೊಲೀಸರು ಟಿಪ್ಪರ್ ಲಾರಿಯಿಂದ ಮೃತದೇಹವನ್ನ ಹೊರತೆಗೆದು ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಯ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ  ಪೊಲೀಸರನ್ನ ಉಲ್ಲೇಖಿಸಿ ತನ್ನ ಹೆಸರು ಪ್ರಶಾಂತ್. ನಾನು ಸಾಯಲು ಕಾರಣ ನಾಗರತ್ನ, ನಾರಾಯಣ, ಗಾಯತ್ರಿ ಹಾಗೂ ಶಾರದ ಅಂತ ಡೆತ್‍ನೋಟ್‍ನಲ್ಲಿ ಬರೆದಿದ್ದಾನೆ ಎನ್ನಲಾಗಿದೆ. ಇವರ ಕಿರುಕುಳವೇ ನನಗೆ ಕಾರಣ. ಇವರನ್ನ ಕರೆಸಿ ವಿಚಾರಣೆ ನಡೆಸಿ. ಅವರನ್ನ ಬಿಡಬೇಡಿ ಅಂತ ಪೊಲೀಸರಿಗೆ ಮನವಿ ಮಾಡಿದ್ದಾನೆ. ಅದರೆ ಡೆತ್‍ನೋಟ್‍ನಲ್ಲಿ ವಿಳಾಸ ಬರೆದಿಲ್ಲ. ಮೃತ ವ್ಯಕ್ತಿಯ ವಿಳಾಸ ಪತ್ತೆ ಹಚ್ಚಲು ಪೊಲೀಸರು ಕಾರ್ಯನಿರತರಾಗಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ