ರೈತರ ಪ್ರತಿಭಟನೆ-ಪ್ರಯಾಣಿಕರ ಪರದಾಟ !

Kannada News

24-07-2017

ಮೈಸೂರು: ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಂಜನಗೂಡಿನಲ್ಲಿ, ರೈತರಿಂದ ಪ್ರತಿಭಟನೆ ನಡೆದಿದೆ. ಮೊದಲು ಜಿಲ್ಲೆಯ ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಂಜನಗೂಡಿನಲ್ಲಿ ನೂರಾರು ರೈತರು ಬೀದಿಗಿಳಿದಿದ್ದರು. ನಂಜನಗೂಡಿನ ಕಪಿಲಾನದಿಯ ಸೇತುವೆ ಮೇಲ್ಭಾಗದಲ್ಲಿ ಧರಣಿ ಪ್ರತಿಭಟನೆ ನಡೆಸುತ್ತಿದ್ದೂ, ಪರಿಣಾಮ ಮೈಸೂರು ನಂಜನಗೂಡು ನಡುವಿನ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಸಾಲು-ಸಾಲು ವಾಹನಗಳು ನಿಂತಿದ್ದೂ ಪ್ರತಿಭಟನೆಯ ಬಿಸಿ ಪ್ರಯಾಣಿಕರಿಗೂ ತಟ್ಟಿತ್ತು. ಇದರಿಂದ ದೂರದ ಊರುಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಡು ವಂತಾಗಿದೆ. ಇನ್ನು ನಾಲೆಗಳಿಗೆ ನೀರು ಹರಿಸುವಂತೆ, ಮೈಸೂರಿನ ಕೆ.ಆರ್ ವೃತ್ತದ ಬಳಿ, ಶಾಸಕ ಸಾ.ರಾ ಮಹೇಶ್ ನೇತೃತ್ವದಲ್ಲಿ ಸಾಗುತ್ತಿದ್ದ ಪ್ರತಿಭಟನಾಕಾರರಿಗೆ ಪೊಲೀಸರು ತಡೆ ಉಂಟುಮಾಡಿದ್ದೂ, ಇದರಿಂದ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿತ್ತು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದೂ, ನಂತರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ