ಈ ಬಾರಿ ದಸರಾ ಅದ್ದೂರಿಯೋ-ಸರಳವೋ..?

Kannada News

24-07-2017

ಮೈಸೂರು: ಮುಂಬರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕುರಿತು, ಬೆಂಗಳೂರಿನಲ್ಲಿಂದು ಹೈಪವರ್ ಕಮಿಟಿ ಸಭೆ ಆಯೋಜಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆ ಇದಾಗಿದ್ದೂ, ಮೈಸೂರು ಭಾಗದ ಜಿಲ್ಲೆಗಳ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು  ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಈ ಬಾರಿ ಅದ್ದೂರಿ ದಸರಾವೋ ಅಥವಾ ಸರಳ ದಸರಾವೋ ಎಂದು ನಿರ್ಧಾರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದ 5 ನೇ ಬಾರಿ ಆಚರಣೆ ಆಗುತ್ತಿರುವ ದಸರಾ ಮಹೋತ್ಸವವಾಗಿದ್ದೂ, ಪ್ರಸ್ತುತ ರಾಜ್ಯ ಸರ್ಕಾರಕ್ಕೆ ಇದು ಕೊನೆಯ ದಸರಾ ಆಗಲಿದೆ. ಹೀಗಾಗಿ ದಸರಾ ಆಚರಣೆಗೆ ಎಷ್ಟು ಅನುದಾನ ಸಿಗಲಿದೆ ಎಂಬುದು ಹೆಚ್ಚು ಗಮನ ಸೆಳೆದಿದೆ. ಆದ್ದರಿಂದ ಈ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ