ಬಿ.ಎಸ್.ವೈ ಮಿಷನ್ 150 ಖಚಿತ..?

Kannada News

24-07-2017

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಸಮೇತ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಬೆಟ್ಟದ ೫೭೫ ಮೆಟ್ಟಿಲುಗಳನ್ನೇರಿ ಪೂಜೆ ಸಲ್ಲಿಸಿದ್ದೂ, ಈ ವೇಳೆ ಮಾತನಾಡಿದ ಅವರು, ನಾನು ಪ್ರತಿವರ್ಷ ಮನಶಾಂತಿಗೋಸ್ಕರ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ. ನನಗೆ ಹಂಪಿ ಮತ್ತು ಆನೇಗುಂದಿ ಪ್ರಿಯವಾದ ಸ್ಥಳ. ನಾನು ಕುಟುಂಬ ಸಮೇತ ಪ್ರತಿವರ್ಷ ಆಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತೇನೆ, ಈ ವಿಚಾರವಾಗಿ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ. ಚುನಾವಣೆಯಲ್ಲಿ ಬಿಎಸ್ ವೈ ನೇತೃತ್ವದ ೧೫೦ ಮಿಷನ್ ಮುಟ್ಟುವುದು ಖಂಡಿತ ಎಂದಿದ್ದೂ, ಬಿಜೆಪಿಯಲ್ಲಿ ಎಲ್ಲಾ ಭಿನ್ನಮತ ಶಮನವಾಗಿದೆ, ಹೈಕಮಾಂಡ್ ಯಾವುದೆ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದರು. ಕೊಪ್ಪಳದಲ್ಲಿ ಸ್ಪರ್ಧೆ ಮಾಡುವು ವಿಚಾರವನ್ನು ತಳ್ಳಿ ಹಾಕಿ, ಸ್ಪರ್ಧೆ ವಿಚಾರ ಈಗ ಬೇಡ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಕೊಪ್ಪಳ ಬಿ.ಎಸ್.ವೈ ಮಿಷನ್ 150 ಖಚಿತ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ