ಬಂಗಾರಪೇಟೆ ಬಂದ್ ಗೆ ನೀರಸ ಪ್ರತಿಕ್ರಿಯೆ !

Kannada News

24-07-2017

ಕೋಲಾರ: ಪೌರಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ ಬಂಗಾರಪೇಟೆ ಬಂದ್ ಆಚರಿಸಲಾಗುತ್ತಿದ್ದೂ, ಪೌರಕಾರ್ಮಿಕರು ಮತ್ತು ಇತರೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಬಂಗಾರಪೇಟೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮತ್ತು ಬಂಗಾರಪೇಟೆ ತಾಲ್ಲೂಕು ಕಛೇರಿ ಎದುರು, ಬಿಜೆಪಿ ಮುಖಂಡರಾದ ವೇಲ್ ಮುರುಗನ್ ಮತ್ತು ಸುಭ್ರಮಣಿ ಅವರ ಭೂತದಹಿಸಿ ಪ್ರತಿಭಟನೆ ನಡೆಸಿದರು. ಪೌರಕಾರ್ಮಿಕ ಶಿವು ಮತ್ತು ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತವಾಗಿದ್ದೂ, ಇಂದು ಹಲ್ಲೆ ಖಂಡಿಸಿ ಬಂಗಾರಪೇಟೆ ಬಂದ್ ಗೆ ಪೌರಕಾರ್ಮಿಕರು ಮತ್ತು ವಿವಿಧ ಸಂಘಟನೆಗಳು ಕೆರೆ ನೀಡಿದ್ದವು. ಆದರೆ ಬಂಗಾರಪೇಟೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಶನಿವಾರ ರಸ್ತೆ ತೆರವು ಸಂಬಂಧ ರಘುರಾಮರೆಡ್ಡಿ ಕುಟುಂಬ ಹಲ್ಲೆ ನಡೆಸಿತ್ತು. ಹಲ್ಲೆ ಖಂಡಿಸಿ ಕರೆ ನೀಡಿದ್ದ ಬಂದ್ ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದೂ, ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ