ಸಿಗರೇಟ್ ವಿಚಾರಕ್ಕೆ ಚಾಕುವಿನಿಂದ ಇರಿತ !

Kannada News

24-07-2017

ಹುಬ್ಬಳ್ಳಿ: ಸಿಗರೇಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು, ಮಾರಣಾಂತಿಕ ಹಲ್ಲೆ ಮಾಡಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ, ವಿಲ್ಸನ್ ಮತ್ತು ರವಿ ಖಂಡೇಕರ್ ಎಂಬುವರು, ಪುನೀತ್ (೨೧) ಕೃಷ್ಣ (೨೨) ಎಂಬ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಹುಬ್ಬಳ್ಳಿಯ ರಮೇಶ ಭವನ್ ಹೊಟೇಲ್ ಬಳಿ ಘಟನೆ ಸಂಭವಿಸಿದೆ. ಕೇಶ್ವಾಪುರ ನಿವಾಸಿಗಳಾದ ಪುನೀತ್ ಹಾಗೂ ಕೃಷ್ಣ, ವಿಲ್ಸನ್ ಮತ್ತು ರವಿ ನಡುವೆ, ಸಿಗರೇಟ್ ವಿಚಾರವಾಗಿ, ಜಗಳ ನಡೆದಿತ್ತು, ಈ ವೇಳೆ ವಿಲ್ಸನ್ ಮತ್ತು ರವಿ ಚಾಕುವಿನಿಂದ ಇರಿದು, ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಪುನೀತ್ ಹಾಗೂ ಕೃಷ್ಣ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದೂ, ಪುನೀತ್ ನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ