ಕರೆಯಲ್ಲಿ ಸ್ನಾನಕ್ಕೆ ಹೋದವನು ದುರ್ಮರಣ !

Kannada News

24-07-2017

ರಾಮನಗರ: ಸ್ನಾನ ಮಾಡಲು ಕೆರೆಗೆ ಹೋಗಿ, ಆಕಸ್ಮಿಕವಾಗಿ ಕೆಸರಿನಲ್ಲಿ ಬಿದ್ದ ಅಪರಿಚಿತ ವ್ಯಕ್ತಿಯೊಬ್ಬರು, ಸಾವನ್ನಪ್ಪಿರುವ ಘಟನೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ, ಕೋಡಂಬಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ. ನೆನ್ನೆ ಬೆಳಿಗ್ಗೆ ಸ್ನಾನ ಮಾಡಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಕೆಸರು ಗುಂಡಿಗೆ ಬಿದ್ದ ಪರಿಣಾಮ, ಕೆಸರಿನಲ್ಲೇ ಸಿಕ್ಕಿ ಬಿದ್ದ ವ್ಯಕ್ತಿ, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಚಪ್ಪಲಿ, ಟೂತ್ ಬ್ರಶ್, ಶಾಂಪೂ, ಸೋಪು ಪತ್ತೆಯಾಗಿವೆ. ಚನ್ನಪಟ್ಟಣದ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ