ಮುಖ್ಯಮಂತ್ರಿಗಳ ಪರಿಹಾರ ನಿಧಿ ದುರುಪಯೋಗ..?

Kannada News

22-07-2017

ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡವರ ವೈದ್ಯಕೀಯ ವೆಚ್ಚಗಳಿಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ. ಆದರೆ, ಇದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಯಶವಂತಪುರದಲ್ಲಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ವಿಮೆ ಕುರಿತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ವೈದ್ಯಕೀಯ ನೆರವು ಕೋರಿ ಸಲ್ಲಿಕೆಯಾಗಿದ್ದ ಕೆಲವರ ದಾಖಲೆಗಳು ನಕಲಿ ಆಗಿರುತ್ತವೆ. ಇದರಿಂದ ಹಣ ದುರುಪಯೋಗ ಆಗುತ್ತಿದೆ. ಅದೇ ರೀತಿ, ಮಧ್ಯವರ್ತಿಗಳಿಂದಲೂ ವಿಮೆ ಹಣಕ್ಕೆ ಕುತ್ತು ಬಂದಿದೆ ಎಂದು ಹೇಳಿದರು. ದೇಶದಲ್ಲಿ 24 ವಿಮೆ ಕಂಪನಿಗಳಿದ್ದು, ಇದರಲ್ಲಿ ನಾಲ್ಕು ಮಾತ್ರ ಸರ್ಕಾರದ್ದು. ಆರು ಲಕ್ಷಕ್ಕೂ ಅಧಿಕ ಮಂದಿ ವಿಮೆಯಲ್ಲಿ ದುಡಿಯುತ್ತಿದ್ದಾರೆ. ಇನ್ನೂ ರಾಜ್ಯದಲ್ಲೂ ಮೂವತ್ತು ಸಾವಿರ ಜನರು ವಿಮೆ ಪ್ರತಿನಿಧಿಗಳಾಗಿದ್ದಾರೆ ಎಂದು ತಿಳಿಸಿದರು. ಪ್ರತಿ ವರ್ಷವೂ ವಿಮೆ ವಹಿವಾಟು ಮೂಲಕ 96 ಸಾವಿರ ಕೋಟಿ ನಡೆಯಲಿದೆ ಎಂದ ಅವರು, ಜನಸಾಮಾನ್ಯರಿಗೆ ಕಡಿಮೆ ಕಂತಿನ ಮೊತ್ತದಲ್ಲಿ ವಿಮೆ ದೊರೆಯುವಂತೆ ಸರ್ಕಾರವೂ ಕ್ರಮ ಕೈಗೊಳ್ಳಬೇಕೆಂದು ಸದಾನಂದಗೌಡ ನುಡಿದರು.

ಫೆಡರೇಷನ್ ಅಧ್ಯಕ್ಷ ಬಸವರಾಜ್ ಮಾತನಾಡಿ, ದೇಶದಲ್ಲೆಡೆ ವಿಮೆ ಏಜೆಂಟ್ ಗಳಿಗೆ ಒಂದೇ ಕಮಿಷನ್, ಒಂದೇ ಸೌಲಭ್ಯ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಯುನೈಟೆಡ್ ಇಂಡಿಯಾ ವಿಮಾ ಕಂಪನಿಯ ಉಪ ವ್ಯವಸ್ಥಾಪಕ ಡಾ.ಎಂ.ಅಬ್ದುಲ್ ಅಝೀಜ್, ಪ್ರವೀಣ್ ಬಿ.ಶರಣ್, ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ಲೋಕೇಶ್ ಸೇರಿ ಪ್ರಮುಖರು ಹಾಜರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ