ಕುಡಿಯವ ನೀರು ಚರಂಡಿ ಪಾಲು !

Kannada News

22-07-2017

ಕೊಪ್ಪಳ: ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾಗುತ್ತಿದೆ. ಪೈಪ್ ಲೀಕ್ ಆಗಿ, ಅಮೂಲ್ಯ ಕುಡಿಯುವ ನೀರು ಚರಂಡಿ ಪಾಲಾಗುತ್ತಿರುವುದು ಕಂಡುಬಂದಿದೆ. ಕೊಪ್ಪಳ ನಗರದ ಬಸ್ ನಿಲ್ದಾಣದ ಮುಂದೆ ಭಾರೀ ಪ್ರಮಾಣದ ನೀರು ಪೋಲಾಗುತ್ತಿದ್ದೂ, ಬಸ್ ನಿಲ್ದಾಣದ ಮುಂದಿರುವ ರಾಜಕಾಲುವೆ ಪಕ್ಕದಲ್ಲಿದ್ದ, ನೀರು ಸರಬರಾಜು ಪೈಪ್ ಒಡೆದು ಹೋಗಿದೆ. ಇದರಿಂದ, ನೀರು ಚರಂಡಿ ಸೇರುತ್ತಿದೆ. ಕಳೆದ ಒಂದು ಗಂಟೆಯಿಂದ ನೀರು ಪೋಲಾಗುತ್ತಿದ್ದರೂ, ಇತ್ತ ಗಮನ ಹರಿಸದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರು ಪೋಲಾಗುತ್ತಿದೆ ಎಂದು ಆರೋಪಿದ್ದಾರೆ. ಕುಡಿಯೋ ನೀರು ಚರಂಡಿ ಪಾಲಾಗುತ್ತಿದ್ದರೂ, ನಗರಸಭೆ ಕಣ್ಮುಚ್ಚಿ ಕುಳಿತುಕೊಂಡಿದೆ ಎಂದು ದೂರಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ಕೊಪ್ಪಳ ಕುಡಿಯವ ನೀರು ಚರಂಡಿ ಪಾಲು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ