ಕಲ್ಲು ಕುಸಿದು ಕಾರ್ಮಿಕ ಸಾವು !

Kannada News

22-07-2017

ಬೆಂಗಳೂರು: ಮನೆ ನಿರ್ಮಾಣ ಕಾಮಗಾರಿ ವೇಳೆ ಪಾಯ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ. ತಮಿಳುನಾಡು ಮೂಲದ ಸೇಟು(23) ಮೃತ ಕಾರ್ಮಿಕ. ಮೈಸೂರು ರಸ್ತೆ ಗೌರಿಪಾಳ್ಯದಲ್ಲಿ ವೈದ್ಯರೊಬ್ಬರ ಮನೆ ನಿರ್ಮಾಣದ ವೇಳೆ ಶುಕ್ರವಾರ ಪಾಯ ತೋಡುವಾಗ ಕಾರ್ಮಿಕನ ಮೇಲೆ ಕಲ್ಲು ಕುಸಿದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಮೂಲದ 10 ಮಂದಿ ಕಾರ್ಮಿಕರು ಪಾಯ ತೋಡುತ್ತಿದ್ದರು. ಪಕ್ಕದಲ್ಲಿ ಕಟ್ಟಿದ್ದ ಕಲ್ಲಿನ ಪಾಯ ಕುಸಿಯುತ್ತದೆ, ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರಿಗೆ ಕಾರ್ಮಿಕರು ತಿಳಿಸಿದ್ದಾರೆ. ಆಗ ವೈದ್ಯರೇ ಗುಂಡಿ ಒಳಗೆ ಇಳಿದು ಮಣ್ಣು ತೋಡಿ ಧೈರ್ಯ ತುಂಬಿದ್ದಾರೆ. ಸೇಟು ಸೇರಿ 6 ಕಾರ್ಮಿಕರು ಗುಂಡಿಗೆ ಇಳಿದು ಮಣ್ಣು ತೋಡುತ್ತಿದ್ದಾಗ ಪಕ್ಕದ ಕಲ್ಲಿನ ಗೋಡೆ ಏಕಾಏಕಿ ಕುಸಿದಿದೆ. ಕಲ್ಲಿನ ಕೆಳಗೆ ಸೇಟು ಸಿಲುಕಿದ್ದ. ಸಹೋದ್ಯೋಗಿಗಳು ಮಣ್ಣು, ಕಲ್ಲು ತೆರವು ಮಾಡಿ ಸೇಟುನನ್ನು ಮೇಲೆ ಎತ್ತಿದ್ದು, ವೈದ್ಯರೇ ತಮ್ಮ ಕ್ಲೀನಿಕ್‌ಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಟ್ಟಿದ್ದಾರೆ. ನಂತರ ಬಸವನಗುಡಿ ಬುಲ್‌ಟೆಂಪಲ್ ರಸ್ತೆಯ ಶೇಖರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ  ಚಿಕಿತ್ಸೆ ಫಲಿಸದೆ ಸೇಟು ರಾತ್ರಿ ಮೃತಪಟ್ಟಿದ್ದಾನೆ. ಶವ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಮುಂದಾದಾಗ ತಡೆದು ಸಹೋದ್ಯೋಗಿಗಳು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು  ಬಸವನಗುಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಕಲ್ಲು ಕುಸಿದು ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ