ರಾಸಲೀಲೆ ವೀಡಿಯೋ ಹರಿಬಿಟ್ಟ ಕಾಮುಕರ ಬಂಧನ !

Kannada News

22-07-2017

ವಿಜಯಪುರ: ವಿವಾಹಿತ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ವೀಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡು, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಇಬ್ಬರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ಘಟನೆ ನಡೆದಿದೆ. ಮಹಿಳೆಯ ಜೊತೆ ಅನೈತಿಕ ಲೈಂಗಿಕ ಕ್ರಿಯೆ ನಡೆಸಿದ್ದ ವ್ಯಕ್ತಿ ಹಾಗೂ ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಹಾಕಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲೆಯ, ಹೊರ್ತಿ ಪೊಲೀಸರಿಂದ  ಬಂಧಿಸಲಾಗಿದೆ. ರಾಸಲೀಲೆಯಲ್ಲಿ ತೊಡಗಿದ್ದ ಬಸವರಾಜ ಗಡ್ಡದ ಹಾಗೂ ಇದನ್ನು ಮೊಬೈಲ್ ನಲ್ಲಿ ಸೆರೆಹಿಡಿದ ರೇವಣಸಿದ್ದ ಬೋಸಗಿ ಬಂಧಿತ ಆರೋಪಿಗಳು. ಜುಲೈ 16ರಂದು ಹೊರ್ತಿ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹೊರ್ತಿ ಪೊಲೀಸರು. ಮಹಿಳೆಯ ಮಾನ ಹರಾಜು, ತಾಂತ್ರಿಕತೆ ದುರುಪಯೋಗ, ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ವೀಡಿಯೋ ಬಿತ್ತರಣೆ ಆರೋಪದಲ್ಲಿ ಬಂಧಿಸಿದ್ದಾರೆ. ಐ ಪಿ ಸಿ ಸೆಕ್ಷನ್ 354c, 66, 67 ಅಡಿಯಲ್ಲಿ ಬಂಧನ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ