ಒಂದು ಲಕ್ಷ ಖೋಟಾ ನೋಟು ಪತ್ತೆ

Kannada News

22-07-2017

ಕೊಪ್ಪಳ: ಒಂದು ಲಕ್ಷ ಮೌಲ್ಯದ ಖೋಟಾ ನೋಟು ಹಾಗೂ ನೋಟು ತಯಾರಿಸಲು ಬಳಸುತ್ತಿದ್ದ ಕಲರ್ ಪ್ರೀಂಟರ್ ಹಾಗೂ ಪೇಪರ್ ಗಳು ಕೊಪ್ಪಳ ನಗರದಲ್ಲಿ ಪತ್ತೆಯಾಗಿದೆ. ಕೊಪ್ಪಳ ನಗರದ ಕುಂಬಾರ ಓಣಿಯ ಶಿವಕುಮಾರ ಎಂಬಾತನ ಮನೆಯಲ್ಲಿ ಈ ನೊಟುಗಳು ಪತ್ತೆಯಾಗಿವೆ. ಶಿವಕುಮಾರ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಫಕೀರಮ್ಮ ನೇತೃತ್ವದ ತಂಡ ಶಿವಕುಮಾರ ಮನೆಯ ಮೇಲೆ ದಾಳಿ ಮಾಡಿದೆ, ಈ ಸಂದರ್ಭದಲ್ಲಿ ೨ ಸಾವಿರ ಮುಖಬೆಲೆಯ ೫೦ ಖೋಟಾ ನೋಟು ಹಾಗೂ ನೋಟು ತಯಾರಿಕೆಗೆ ಬಳಸುವ ಸಾಮಗ್ರಿಗಳು ಪತ್ತೆಯಾಗಿವೆ. ಇನ್ನು ಶಿವಕುಮಾರ ಮನೆಗೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ, ಈ ವಿಷಯ ಸಾರ್ವಜನಿಕರಿಗೂ ಕೂಡಾ ಗೊತ್ತಾಗಲಿ ಎಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಲೈವ್ ಆಗಿ ಇಟ್ಟಿದ್ದರು. ಫೇಸ್ ಬುಕ್ ಲೈವ್ ವೀಕ್ಷಿಸಿದ, ಸಾರ್ವಜನಿಕರು ಶಿವಕುಮಾರ ಮನೆ ಮುಂದೆ ಜಮಾವಣೆಗೊಂಡಿದ್ದರು. ಬಳಿಕ ಶಿವಕುಮಾರ್ ನನ್ನು ಬಂಧಿಸಿ ಠಾಣೆಗೆ ಕರೆ ತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಿವಕುಮಾರ ಪೋಷಕರು, ಗೆಳೆಯರು  ಠಾಣೆಯ ಮುಂದೆ ಬಂದು ಪ್ರತಿಭಟನೆ ಮಾಡಿದ ಘಟನೆ ಕೂಡಾ ನಡೆಯಿತು. ಯಾರೋ ದುಷ್ಕರ್ಮಿಗಳು ಈ ರೀತಿ ನಮ್ಮ ಮನೆಯಲ್ಲಿ  ಖೋಟಾ ನೋಟು, ತಂದಿಟ್ಟಿದ್ದಾರೆಂದು ಎಂದು ಶಿವಕುಮಾರ ಸಂಬಂಧಿಕರು ಆರೋಪಿಸಿದರು. ಇನ್ನು ಶಿವಕುಮಾರ ಮಾತನಾಡುತ್ತಾ, ಇದು ನನ್ನ ವಿರುದ್ಧ ಯಾರೋ ಶಡ್ಯಂತ್ರ ರೂಪಿಸಿದ್ದಾರೆ. ನನಗೆ ಪೊಲೀಸರ ಮೇಲೆ ನಂಬಿಕೆ ಇದೆ, ದಯವಿಟ್ಟು ಪ್ರತಿಭಟನೆಯನ್ನು ಕೈ ಬಿಡಿ ಎಂದು ಮನವಿ ಮಾಡಿಕೊಂಡರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ