ದೊಡ್ಡ ನೋಟಿಗೆ ಕುತ್ತು..?

Kannada News

21-07-2017 667

ನರೇಂದ್ರ ಮೋದಿ ಸರ್ಕಾರ, ಕಳೆದ ವರ್ಷದ ನವೆಂಬರ್‌ ನಲ್ಲಿ ಒಂದು ಸಾವಿರ ಮತ್ತು ಐದುನೂರು ರೂಪಾಯಿಗಳ ಹಳೆಯ ನೋಟುಗಳನ್ನು ಅಮಾನ್ಯ ಮಾಡಿತ್ತು. ಆನಂತರ, ಜನಸಾಮಾನ್ಯರು ತಮ್ಮ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟರು, ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಿದರು. ನೋಟು ರದ್ದತಿ ನಿರ್ಧಾರದಿಂದ ಹಲವು ತಿಂಗಳ ಕಾಲ, ವ್ಯಾಪಾರ-ವಹಿವಾಟುಗಳು ಸೊರಗಿದವು, ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೂ ಪೆಟ್ಟು ಬಿತ್ತು. ಹಳೆಯ ನೋಟು ರದ್ದತಿ ನಂತರದ ದಿನಗಳಲ್ಲಿ, ದೇಶದಲ್ಲಿ ಎರಡು ಸಾವಿರ ರೂಪಾಯಿಗಳ ಹೊಸ ನೋಟುಗಳನ್ನು ಚಲಾವಣೆಗೆ ತರಲಾಯಿತು. ಎರಡು ಸಾವಿರ ರೂಪಾಯಿ ಹೊಸ ನೋಟುಗಳು ನೋಡಲು ಚೆನ್ನಾಗಿಲ್ಲ, ತೆಳುವಾಗಿವೆ, ಬಣ್ಣ ಹೋಗುತ್ತದೆ ಇತ್ಯಾದಿ ಅಪಸ್ವರಗಳು ಆರಂಭದಲ್ಲೇ ಕೇಳಿ ಬಂದಿದ್ದವು. ಎರಡು ಸಾವಿರ ರೂಪಾಯಿ ಹೊಸ ನೋಟುಗಳು ಚಲಾವಣೆಗೆ ಬಂದ ಕೆಲವೇ ದಿನಗಳಲ್ಲಿ, ಅದೇ ರೀತಿಯ ನಕಲಿ ನೋಟುಗಳ ಚಲಾವಣೆಯೂ ಹಲವು ಕಡೆ ಪತ್ತೆಯಾಗಿತ್ತು.

ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗೆ ಒಳಗಾಗುತ್ತಿರುವ ಎರಡು ಸಾವಿರ ರೂಪಾಯಿ ನೋಟುಗಳು ಇದೀಗ ಸಂಪೂರ್ಣವಾಗಿ ಮಾಯ ವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಕೆಲವು ತಿಂಗಳ ಹಿಂದೆ ಎಟಿಎಮ್ ಮತ್ತು ಬ್ಯಾಂಕ್‌ಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದ್ದ ಎರಡು ಸಾವಿರ ರೂಪಾಯಿ ನೋಟುಗಳು ಇತ್ತೀಚೆಗೆ ಕಾಣಿಸುವುದೇ ಅಪರೂಪವಾಗಿದೆ. ಇದೀಗ, ಎಲ್ಲಾ ಕಡೆ ಐದುನೂರು ಮತ್ತು ನೂರು ರೂಪಾಯಿ ನೋಟುಗಳೇ ಹೆಚ್ಚಾಗಿ ಚಲಾವಣೆಯಲ್ಲಿ ಕಂಡುಬರುತ್ತಿವೆ. ಬ್ಯಾಂಕ್‌ಗಳವರೂ ಕೂಡ, ಎರಡು ಸಾವಿರ ರೂಪಾಯಿ ನೋಟುಗಳನ್ನು ವಿತರಣೆ ಮಾಡುತ್ತಿಲ್ಲ. ಇದೆಲ್ಲವನ್ನೂ ನೋಡಿದರೆ, ಅಕ್ರಮವಾಗಿ  ನಗದು ಸಂಗ್ರಹ ಮಾಡುವವರು, ಈಗಾಗಲೇ ಕೋಟ್ಯಂತರ ಮೌಲ್ಯದ ಎರಡು ಸಾವಿರ ರೂಪಾಯಿ ನೋಟುಗಳನ್ನು ಆಯಕಟ್ಟಿನ ಜಾಗಗಳಲ್ಲಿ ತುಂಬಿಟ್ಟುಕೊಂಡಿರಬೇಕು ಎಂಬ ಅನುಮಾನ ಮೂಡುತ್ತದೆ. ಹೀಗಾಗಿ ಮೋದಿ ಸರ್ಕಾರ, ಹೆಚ್ಚಿನ ಮೌಲ್ಯದ ಎರಡು ಸಾವಿರ ರೂಪಾಯಿ ನೋಟುಗಳನ್ನು ಮತ್ತೆ ಅಮಾನ್ಯೀಕರಣಗೊಳಿಸುವ ಎಲ್ಲಾ ಲಕ್ಷಣಗಳೂ ನಿಚ್ಚಳವಾಗಿ ಕಂಡು ಬರುತ್ತಿದೆ. ಒಂದು ವೇಳೆ, ನೀವುಗಳೇನಾದರೂ ಯಾರಿಗೂ ಕಾಣದ ಜಾಗದಲ್ಲಿ ಒಂದಷ್ಟು ಹೊಸ ಎರಡು ಸಾವಿರ ರೂಪಾಯಿ ನೋಟುಗಳನ್ನು ಬಚ್ಚಿಟ್ಟಿದ್ದರೆ, ಅವನ್ನು ಬಿಚ್ಚಿಟ್ಟು ಮತ್ತೆ ಚಲಾವಣೆಗೆ ಬಿಟ್ಟುಬಿಡುವುದೇ ಒಳ್ಳೆಯದು ಅನ್ನಿಸುತ್ತದೆ.

 

 ಸಂಬಂಧಿತ ಟ್ಯಾಗ್ಗಳು

ದೊಡ್ಡ ದೊಡ್ಡ ನೋಟಿಗೆ ಕುತ್ತು..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ