ಒಂದೇ ದಿನದಲ್ಲಿ ಕೊಲೆ ಆರೋಪಿ ಬಂಧನ !

Kannada News

21-07-2017

ಬೆಂಗಳೂರು: ಜಯನಗರದ ಕನಕಪುರ ಮುಖ್ಯರಸ್ತೆಯ ಪುಟ್‍ಪಾತ್ ಬಳಿ, ಇರ್ಫಾನ್ ಶರೀಫ್ ಆಲಿಯಾಸ್ ಅಪ್ಪುನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ, ಆರೋಪಿಯನ್ನು ಕೇವಲ 24 ಗಂಟೆಯೊಳಗೆ ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಯನಗರ 5ನೇ ಬ್ಲಾಕ್ ನ ಪುರುಶೋತ್ತಮ ಆಲಿಯಾಸ್ ಪುರ್ಶಿ (24) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ. ಕಳೆದ ಜುಲೈ 19ರ ಸಂಜೆ ಜಯನಗರ 7ನೇ ಬ್ಲಾಕ್‍ ನ ಕನಕಪುರ ಮುಖ್ಯರಸ್ತೆಯ, ಹರಿಕಾಲೋನಿಯ ಸರಬಂಡೆಪಾಳ್ಯದ ಬಳಿಯ ಪುಟ್‍ಪಾತ್‍ನಲ್ಲಿ, ಪಂಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ಇರ್ಫಾನ್ ಶರೀಫ್‍ನ  ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ, ಆರೋಪಿ ಪುರ್ಶಿಯನ್ನು ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ.

ಕೊಲೆಯಾದ ಶರೀಫ್, ಸ್ನೇಹಿತರಾದ ಸ್ಟೀಫನ್ ಹಾಗೂ ಹರೀಶನ ಜತೆ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರಕ್ಕೆ ಪುರ್ಶಿ ಜತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಈ ಕೊಲೆ ನಡೆದಿದೆ . ಆರೋಪಿಗಳನ್ನು ಪತ್ತೆಹಚ್ಚಲು ರಚಿಸಲಾಗಿದ್ದ ವಿಶೇಷ ತಂಡ ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ