ಯುವತಿಯೊಂದಿಗೆ ಆಟೋ ಚಾಲಕನ ಅಸಭ್ಯ ವರ್ತನೆ !

Kannada News

21-07-2017

ಬೆಂಗಳೂರು: ಓಲಾ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ, ಆಟೋ ಚಾಲಕನೋರ್ವನನ್ನು ಇಂದಿರಾನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಓಲಾ ಆಟೋ ಚಾಲಕನಾದ ಮಂಜುನಾಥ್ ಬಂಧಿತ ಆರೋಪಿಯಾಗಿದ್ದಾನೆ, ಕಾಲೇಜು ವಿದ್ಯಾರ್ಥಿನಿಯಾಗಿರುವ 19 ವರ್ಷದ ಯುವತಿ ನಿನ್ನೆ ಇಂದಿರಾನಗರದಲ್ಲಿ ಆಟೋ ಹತ್ತಿ ಪ್ರಯಾಣಿಸುತ್ತಿದ್ದಾಗ, ಆರೋಪಿ ಮಂಜುನಾಥ್ ಕಿಟಕಿಯಿಂದ ಹಿಂದೆ ಕುಳಿತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಅಲ್ಲದೆ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ. ಇದರಿಂದ ಆತಂಕಗೊಂಡ ಯುವತಿ ತಕ್ಷಣ ಕಿರುಚಿಕೊಂಡು ಆಟೋದಿಂದ ಕೆಳಗಿಳಿದಿದ್ದಳು. ನಂತರ ಪೊಲೀಸ್ ಕಂಟ್ರೋಲ್‍ರೂಂಗೆ  ಕರೆ ಮಾಡಿ ವಿಷಯ ತಿಳಿಸಿ, ಬರೆದುಕೊಂಡಿದ್ದ ಆಟೋ ನಂಬರ್ ಕೊಟ್ಟಿದ್ದಾರೆ. ಕಂಟ್ರೋಲ್ ರೂಂಗೆ ಫೋನ್ ಮಾಡುತ್ತಿದ್ದಂತೆ ಆರೋಪಿ ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದ.

ತಕ್ಷಣ ಇಂದಿರಾನಗರ ಪೊಲೀಸರಿಗೆ ಕಂಟ್ರೋಲ್ ರೂಂ ಮೂಲಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಆಟೋ ನಂಬರ್ ಆಧಾರದ ಮೇಲೆ, ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿ ಮಂಜುನಾಥ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದೂ ತನಿಖೆ ಮುಂದುವರೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ