ಕುಡಿತದ ಚಟ: ವ್ಯಕ್ತಿ ಆತ್ಮಹತ್ಯೆ !

Kannada News

21-07-2017

ಬೆಂಗಳೂರು: ಬಸವೇಶ್ವರ ನಗರದ ಬೋವಿ ಕಾಲೋನಿಯಲ್ಲಿ, ಕುಡಿತದ ಚಟ ಅಂಟಿಸಿಕೊಂಡು ಕೆಲಸಕ್ಕೆ ಹೋಗದೆ, ಮನೆಯಲ್ಲಿರುತ್ತಿದ್ದ, ಕಾರು ಚಾಲಕ ಮುನಿರಾಜು ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಬೋವಿ ಕಾಲೋನಿಯ 16ನೇ ಕ್ರಾಸ್‍ ನ ಮುನಿರಾಜು (30)ಮೂರು  ವರ್ಷಗಳ ಹಿಂದೆ ಲಕ್ಷ್ಮಿ ಎಂಬುವವರನ್ನು ವಿವಾಹವಾಗಿದ್ದು ಆತನಿಗೆ, ಒಂದೂವರೆ ವರ್ಷದ ಗಂಡು ಮಗುವಿದೆ. ಕುಡಿತಕ್ಕೆ ದಾಸನಾಗಿದ್ದ ಮುನಿರಾಜು, ಸರಿಯಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. 2 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿರಲಿಲ್ಲ. ಮನೆ ಮಾಲೀಕರು ಬಾಡಿಗೆ ಕಟ್ಟುವಂತೆ ಒತ್ತಡ ತಂದಿದ್ದರು, ಇದರಿಂದ ನೊಂದ ಆತ ಪತ್ನಿ, ಲಕ್ಷ್ಮಿ ಗುರುವಾರ ಬೆಳಿಗ್ಗೆ ಮನೆಕೆಲಸಕ್ಕೆ ಹೋದ ನಂತರ ಮದ್ಯ ತಂದು ಸೇವಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಕ್ಷ್ಮಿ ಅವರ ತಾಯಿ ಮಧ್ಯಾಹ್ನ 3ರ ವೇಳೆ ಮನೆಗೆ ಬಂದು ನೋಡಿದಾಗ ಬಾಗಿಲು ತೆಗೆದಿದ್ದು, ಒಳಗೆ ಮುನಿರಾಜು ನೇಣು ಬಿಗಿದುಕೊಂಡಿದ್ದ. ಪಕ್ಕದಲ್ಲೇ ಮದ್ಯದ ಖಾಲಿ ಬಾಟಲಿ ಬಿದ್ದಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ