ರಾಜ್ಯದ 23 ಮಂದಿಗೆ ಐಪಿಎಸ್ !

Kannada News

21-07-2017

ಬೆಂಗಳೂರು: ಸಿಸಿಬಿಯ ಡಿಸಿಪಿ ಜಿನೇಂದ್ರ ಕಣಗಾವಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯ ಎಸ್.ಪಿ ಗಿರೀಶ್, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆನಂದ್‍ಕುಮಾರ್ ಸೇರಿದಂತೆ ರಾಜ್ಯದ 23 ಮಂದಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಯ(ಕೆಎಸ್‍ಪಿಎಸ್) ಅಧಿಕಾರಿಗಳಿಗೆ ಐಪಿಎಸ್ ನೀಡಿ ಕೇಂದ್ರಸರ್ಕಾರ ಆದೇಶ ಹೊರಡಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ 23 ಮಂದಿ ಅಧಿಕಾರಿಗಳಿಗೆ ಕೆಎಸ್‍ಪಿಎಸ್‍ನಿಂದ ಐಪಿಎಸ್‍ಗೆ ಕೇಂದ್ರ ಸರ್ಕಾರ ಬಡ್ತಿ ನೀಡಿದೆ. ಗಿರೀಶ್, ಜಿನೇಂದ್ರ ಕಣಗಾವಿ, ಆನಂದ್‍ಕುಮಾರ್ ಅವರ ಜೊತೆ ಜೋಶಿ ಶ್ರೀನಾಥ್, ಮಹದೇವ್, ವೇದಮೂರ್ತಿ, ಶಾಂತರಾಜು, ಹನುಮಂತರಾಯ, ದೇವರಾಜು, ಸಿರಿಗೌರಿ, ಡಾ. ಧರಣಿದೇವಿ, ಸವಿತಾ, ಸಿ.ಕೆ ಬಾಬಾ, ಅಬ್ದುಲ್ ಅಹದ್, ಪುಟ್ಟಮಾದಯ್ಯ, ಶ್ರೀಧರ, ಅಶ್ವಿನಿ, ಪ್ರಕಾಶ್ ಗೌಡ, ರಶ್ಮಿ, ಶಿವಕುಮಾರ್, ವಿಷ್ಣುವರ್ಧನ, ಸಂಜೀವ್ ಪಾಟೀಲ್, ಪರಶುರಾಮ್, ಆನಂದ್ ಕುಮಾರ್, ಕಲಾಕೃಷ್ಣಮೂರ್ತಿಯವರು ಐಪಿಎಸ್‍ಗೆ ಬಡ್ತಿ ಪಡೆದ ಅಧಿಕಾರಿಗಳಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ