ಮಾದಕವಸ್ತು ದಂಧೆಕೋರರ ಬಂಧನ !

Kannada News

21-07-2017

ಬೆಂಗಳೂರು: ಕೊಕೇನ್ ಇನ್ನಿತರ ಮಾದಕವಸ್ತುಗಳನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಮೂವರು ನೈಜೀರಿಯನ್ನರನ್ನು ಸಿಸಿಬಿ ಪೊಲೀಸರು  ಬಂಧಿಸಿದ್ದಾರೆ. ನೈಜೀರಿಯಾದ ಉಜ್ಜವ ಒಕರಂ ಅಲಿಯಾಸ್ ರಾಕಿ (39), ಮಹಮದ್ (29), ಪ್ಯಾಟ್ರಿಕ್ ಮೋಸಿ (39) ಬಂಧಿತ ಆರೋಪಿಗಳಾಗಿದ್ದಾರೆ ಬಂಧಿತರಿಂದ 2 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆ.ಆರ್.ಪುರಂ ನಲ್ಲಿ ವಾಸಿಸುತ್ತಿದ್ದ ಉಜ್ಜವ ಒಕರಂ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿದ್ದು, ಆತನನ್ನು ಟಿ.ಸಿ ಪಾಳ್ಯದ ರಿಲೆಯನ್ಸ್ ಫ್ರೆಶ್ ಮಾಲ್ ಎದುರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ, ಈ ವೇಳೆ ಆತನಿಂದ 3 ಮೊಬೈಲ್‍ ಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ರಾಮಮೂರ್ತಿ ನಗರದಲ್ಲಿ ವಾಸಿಸುತ್ತಿದ್ದ ಮಹಮದ್‍ನಿಂದ 5 ಗ್ರಾಂ ಕೊಕೇನ್, 7 ಮೊಬೈಲ್‍ಗಳು ಸೇರಿ ಒಂದೂವರೆ ಲಕ್ಷದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಬಿಳಿಶಿವಾಲೆ ಬಸ್ ನಿಲ್ದಾಣದ ಬಳಿ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ. ಆರೋಪಿಯು ಬ್ಯುಸಿನೆಸ್ ವೀಸಾದಡಿ ನಗರಕ್ಕೆ ಬಂದು ಕಾನೂನು ಬಾಹಿರವಾಗಿ ಕೊಕೇನ್ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ. ಮತ್ತೊಬ್ಬ ಆರೋಪಿ ಪ್ಯಾಟ್ರಿಕ್ ಮೋಸಿ, ಟಿ.ಸಿ ಪಾಳ್ಯ ರಸ್ತೆಯಲ್ಲಿ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಆರೋಪಿಯಿಂದ ಮೊಬೈಲ್, ಬೈಕ್, 50 ಸಾವಿರ ಮೌಲ್ಯದ ಕೊಕೇನ್ನನ್ನು ವಶಪಡಿಸಿಕೊಂಡು ಎಲ್ಲರ ವಿರುದ್ಧವೂ ಕೆ.ಆರ್.ಪುರಂ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ