ಕಿರಣ್ ಬೇಡಿ ಹಿಟ್ಲರ್ ಅಂತೆ..?

Kannada News

21-07-2017

ಪುದುಚೇರಿ: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಆಡಳಿತ ಪಕ್ಷಗಳ ನಡುವಿನ ಕಲಹ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚಿನ ಇವರ ರಾಜಕೀಯ ಬೆಳವಣಿಗೆಗಳನ್ನ ಖಂಡಿಸಿ ಹಲವು ಪ್ರತಿಭಟನೆಗಳು ನಡುಯುತ್ತಿವೆ. ಈ ನಡುವೆ ಅವರ ನಿರಂಕುಶ ಧೋರಣೆಯನ್ನ ಪ್ರತಿಬಿಂಬಿಸುವಂತೆ ಕಿರಣ್ ಬೇಡಿ ಭಾವಚಿತ್ರವನ್ನು ಹಿಟ್ಲರ್ ಅವತಾರದಲ್ಲಿ ತೋರಿಸಿ, ಕೆಲ ಫ್ಲೆಕ್ಸ್ ಗಳನ್ನ ಪುದುಚೇರಿಯಲ್ಲಿ ಹಾಕಲಾಗಿದೆ.  ಈ ಮೂಲಕ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ನಡುವಿನ ಕಲಹ ತಾರಕಕ್ಕೇರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫ್ಲೆಕ್ಸ್ ಗಳ ಚಿತ್ರಗಳು ಹರಿದಾಡುತ್ತಿವೆ. ಇತ್ತೀಚೆಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಮೂವರು ಬಿಜೆಪಿ ಸದಸ್ಯರನ್ನು ಎಂಎಲ್ಎ ಆಗಿ ನೇಮಕ ಮಾಡಿದ್ದರು. ಈ ಬೆಳವಣಿಗೆಯೇ ಈಗಿನ ಕಲಹಗಳಿಗೆ ಕಾರಣವಾಗಿದೆ. ಕಿರಣ್ ಬೇಡಿಯವರ ಈ ಸರ್ವಾಧಿಕಾರಿ ದೋರಣೆಯನ್ನ ಖಂಡಿಸಿ ಈ ರೀತಿಯ ಪೋಸ್ಟರ್ ಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಟ್ವೀಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕಿರಣ್ ಬೇಡಿ, ತಮ್ಮನ್ನು ಹಿಟ್ಲರ್ ಮಾದರಿಯಲ್ಲಿ ಚಿತ್ರಿಸಿರುವ ಪೋಸ್ಟರ್ ನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಇದು ಸ್ಥಳೀಯ ಕಾಂಗ್ರೆಸ್ ಘಟಕದ ಕೆಲಸ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಕಿರಣ್ ಬೇಡಿ ವಿರುದ್ಧದ ಆಕ್ರೋಶಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಕಿರಣ್ ಬೇಡಿ ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ