ಲೈಸನ್ಸ್ ಹೇಗೆ ಪಡೆದುಕೊಂಡಿರಿ..?

Kannada News

21-07-2017

ಪಾಟ್ನಾ: ಆರ್.ಜೆ.ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಒಡೆತನದ ಪೆಟ್ರೋಲ್ ಬಂಕ್ ಪರವಾನಗಿಯನ್ನು ಭಾರತ್ ಪೆಟ್ರೋಲಿಯಂ ರದ್ದುಗೊಳಿಸಿದೆ. ಪೆಟ್ರೋಲ್ ಪಂಪ್ ಪರವಾನಗಿ ರದ್ದು ಪಡಿಸುವುದನ್ನು ಪ್ರಶ್ನಿಸಿ ತೇಜ್ ಪ್ರತಾಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ, ಪಾಟ್ನಾ ನ್ಯಾಯಾಲಯ ಭಾರತ್ ಪೆಟ್ರೋಲಿಯಂ ನಿಗಮದ ಮೇಲೆ ಹೇರಿದ್ದ ತಡೆಯಾಜ್ಞೆ ಆದೇಶ ತೆರವುಗೊಳಿಸಿದ ಮೇಲೆ ಪರವಾನಗಿ ರದ್ದು ಪಡಿಸಲಾಗಿದೆ ಎಂದಿದ್ದೂ, ಪೆಟ್ರೋಲ್ ಬಂಕ್ ಪರವಾನಗಿ ಪಡೆಯಲು ತಪ್ಪು ಮಾಹಿತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ತೇಜ್ ಪ್ರತಾಪ್ ಅವರಿಗೆ ನೋಟಿಸ್ ನೀಡಲಾಗಿತ್ತು, ಪೆಟ್ರೋಲ್ ಬಂಕ್ ಪರವಾನಗಿ ಹೇಗೆ ಪಡೆದುಕೊಂಡಿರಿ, ಎಂದು ವಿವರಣೆ ಕೇಳಿ, ತೇಜ್ ಪ್ರತಾಪ್ ಗೆ ಭಾರತ್ ಪೆಟ್ರೋಲಿಯಂ ನಿಗಮ ನೋಟಿಸ್ ನೀಡಿತ್ತು. ಪೆಟ್ರೋಲ್ ಪಂಪ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರ್.ಜೆ.ಡಿ ಸಮರ್ಥನೆ ನೀಡಿದೆ. ಆದರೆ, ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವರ್ಗ ಈ ಬಗೆಗೆ ನಮಗೆ ಯಾವುದೇ ನೋಟಿಸ್ ಬಂದಿಲ್ಲ ಆದ್ದರಿಂದ ತಾವು ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ