ತಿನ್ನಲು ಯೋಗ್ಯವಲ್ಲದ ರೈಲು ಆಹಾರ !

Kannada News

21-07-2017

ನವದೆಹಲಿ: ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ಎಂದು, ಸಂಸತ್ ನಲ್ಲಿ ಸಿಎಜಿ ನೀಡಿದ ವರದಿಯಲ್ಲಿ ಈ ವಿಷಯವನ್ನು ಹೇಳಲಾಗಿದೆ. ಕಲುಷಿತ ಆಹಾರ, ರಿಸೈಕಲ್ ಮಾಡಿದ ಫುಡ್ ಹಾಗೂ ಬಾಟಲಿ ಅಥವಾ ಡಬ್ಬದಲ್ಲಿ ತುಂಬಿಟ್ಟ ಆಹಾರವನ್ನು ಅಂತಿಮ ದಿನಾಂಕದ ನಂತರವೂ ಪ್ರಯಾಣಿಕರಿಗೆ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರೈಲ್ವೆ ಆಹಾರ ನೀತಿಯಲ್ಲಿ ಪದೇ ಪದೇ ಬದಲಾವಣೆಯಾಗುತ್ತಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ರೈಲ್ವೆ ಆಹಾರ ನೀತಿ ಪ್ರಯಾಣಿಕರಿಗೆ ಸದಾ ಪ್ರಶ್ನೆಯಾಗಿಯೇ ಇರುತ್ತದೆ. ಅಲ್ಲದೆ ಆಹಾರ ತಯಾರಿಸುವ ವೇಳೆ ಸ್ವಚ್ಚತೆ ಕೊರತೆ ಎದ್ದು ಕಾಣುತ್ತಿದೆ ಎನ್ನಲಾಗಿದೆ. ಆಹಾರ ತಯಾರಿಸುವ ವೇಳೆ ನೈರ್ಮಲ್ಯದ ಪಾಲನೆಯಾಗುತ್ತಿಲ್ಲ, ರೈಲ್ವೆ ಇಲಾಖೆಯ ಶುಚಿತ್ವ ನೀತಿಯನ್ನು ಉಲ್ಲಂಘಿಸುತ್ತಿದೆ, ಪ್ರಯಾಣಿಕರು ಆಹಾರ ಪಡೆದ ನಂತರ ಬಿಲ್ ಕೂಡ ನೀಡಲಾಗುತ್ತಿಲ್ಲ ಎಂಬ ವಿಚಾರಗಳನ್ನು ಬಹಿರಂಗಪಡಿಸಿದೆ. 74 ರೈಲ್ವೆ ಕೇಂದ್ರ ಹಾಗೂ 80 ರೈಲುಗಳಲ್ಲಿ ಪರಿಶೀಲನೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ