ಸಂಕಷ್ಟದಲ್ಲಿ ಟಾಯ್ಲೆಟ್-ಏಕ್ ಪ್ರೇಮ ಕಥಾ ಚಿತ್ರ !

Kannada News

21-07-2017

ಅಕ್ಷಯ್ ಕುಮಾರ್ ಅಭಿನಯದ ಟಾಯ್ಲೆಟ್-ಏಕ್ ಪ್ರೇಮ ಕಥಾ ಚಿತ್ರತಂಡಕ್ಕೆ ಇನ್ನೊಂದು ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬಳ ಜೀವನ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ ಎಂದು ಆರೋಪಿಸಿ, ಈಗ ಆ ಮಹಿಳೆ ಚಿತ್ರದ ಲಾಭದಲ್ಲಿ ಒಂದು ಪಾಲು ಕೊಡುವಂತೆ ಬೇಡಿಕೆಯಿಟ್ಟಿದ್ದಾಳೆ. ಕೆಲ ದಿನಗಳ ಹಿಂದೆ ಚಿತ್ರ ನಿರ್ದೇಶಕ ನಾರಾಯಣ್ ಸಿಂಹ್ ಹಾಗೂ ಭೂಮಿ ಪಡ್ನೇಕರ್ ಮಧ್ಯಪ್ರದೇಶದ ಬೈತುಲ್ ಗೆ ಹೋಗಿ ಅನಿತಾ ನರ್ರೆ ಜೊತೆ ಮಾತುಕತೆ ನಡೆಸಿದ್ದರು. ನಿರ್ದೇಶಕರು ಅನಿತಾ ಜೊತೆ ಒಪ್ಪಂದದ ಮಾತುಕತೆ ನಡೆಸಿದ್ದರು. 5 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ನಿರ್ದೇಶಕರು ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿದ್ದರು.

ಈ ವೇಳೆ ಸ್ವಲ್ಪ ಸಮಯ ಕೇಳಿದ್ದ ಅನಿತಾ ಈಗ ದೊಡ್ಡ ಬೇಡಿಕೆಯಿಟ್ಟಿದ್ದಾರೆ. ಚಿತ್ರ ಗಳಿಸಿರುವ ಮೊತ್ತದಲ್ಲಿ ಒಂದು ಪಾಲನ್ನು ತಮಗೆ ನೀಡಬೇಕು ಎಂದಿದ್ದಾರೆ. ಆಗ ಮಾತ್ರ ಕರಾರಿಗೆ ಸಹಿ ಹಾಕುವುದಾಗಿ ತಿಳಿಸಿದ್ದಾರೆ. ಚಿತ್ರ ನಿರ್ಮಾಣದ ವೇಳೆ ಅನಿತಾ ಎಂಬ ಮಹಿಳೆ ಇದ್ದಾರೆ ಎಂಬುದೇ ನಮಗೆ ತಿಳಿದಿರಲಿಲ್ಲ. ಅವಳ ಕಥೆಯೂ ಹೀಗೆ ಇದೆ ಎಂಬುದು ತಿಳಿದ ನಂತರ, ಅನಿತಾ ಅವರನ್ನು ಭೇಟಿ ಮಾಡಿ ಹಣ ನೀಡುವುದಾಗಿ ಹೇಳಿದ್ದೆವು. ಆದ್ರೆ ಅನಿತಾ ಈಗ ಮಾತು ಬದಲಿಸುತ್ತಿದ್ದಾರೆಂದು ನಿರ್ದೇಶಕರು ಹೇಳಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ