ಗ್ರೀಸ್ ನಲ್ಲಿ ಪ್ರಬಲ ಭೂಕಂಪ !

Kannada News

21-07-2017

ಗ್ರೀಕ್ ನ ಕೋಸ್ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟು 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ತೀವ್ರತೆಗೆ ಅನೇಕ ಕಟ್ಟಡಗಳು ಹಾನಿಗೊಂಡಿವೆ. ಟರ್ಕಿಶ್ ಕರಾವಳಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 6.3 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಅದಾದ ನಂತರ ಸುಮಾರು 20 ಬಾರಿ ಭೂಮಿ ಕಂಪಿಸಿದೆ. ಭೂಕಂಪನದ ಕೇಂದ್ರ ಬಿಂದು ಗ್ರೀಸ್ ಮತ್ತು ಟರ್ಕಿ ನಡುವಿನ ಸಮುದ್ರದಲ್ಲಿ ಕಂಪ ಸಂಭವಿಸಿದೆ. ಎರಡೂ ದೇಶಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಕಾಸ್ ನಗರಕ್ಕೆ ಹೆಚ್ಚಿನ ಹಾನಿಯಾಗಿದೆ. ನಗರದಲ್ಲಿ ನ ಹಳೇಯ ಕಟ್ಟಡಗಳಿಗೆ ಹೆಚ್ಚಿನ ಹಾನಿಯಾಗಿದೆ. ಸೇನಾಪಡೆ ತುರ್ತು ಸೇವೆಯನ್ನು ಒದಗಿಸಿ, ರಕ್ಷಣಾ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಅಮೆರಿಕ ಜಿಯಾಲಜಿಕಲ್ ಸರ್ವೇ 6.7 ತೀವ್ರತೆಯ ಕಂಪನವನ್ನು ದಾಖಲಿಸಿದ್ದು, ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ