ಮುಂದುವರೆದ ಭಾರೀ ಮಳೆ: ಹೈ ಅಲರ್ಟ್ !

Kannada News

21-07-2017

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಇಂದೂ ಕೂಡ ಮಳೆ ಮುಂದುವರೆದಿದೆ. ಭಾರಿ ಮಳೆಯಿಂದ 85 ಸಾವಿರ ಕ್ಯೂಸೆಕ್ ನೀರು, ರಾಜಾಪೂರ ಡ್ಯಾಂನಿಂದ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಇನ್ನು ಚಿಕ್ಕೋಡಿ ತಾಲ್ಲೂಕಿನ ಕೆಳಮಟ್ಟದ 6 ಸೇತುವೆಗಳು ಮುಳುಗಡೆಯಾಗಿವೆ. ಹಿಪ್ಪರಗಿ ಜಲಾಶಯದಿಂದ 22 ಗೇಟುಗಳ ಮುಖಾಂತರ ಆಲಮಟ್ಟಿ ಡ್ಯಾಂ ಗೆ ನೀರು ನೀರು ಹರಿದುಹೋಗುತ್ತಿದೆ. ಜಿಲ್ಲೆಯ ನದಿಪಾತ್ರದ ಜನರಿಗೆ ತಾಲ್ಲೂಕು ಆಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆಯಿಂದ ಅನಾಹುತಗಳಾಗುವ ಸಂಭವ ಹೆಚ್ಚಿದ್ದೂ, ಶಿಥಿಲಗೊಂಡ ಕಟ್ಟಡಗಳಲ್ಲಿ ಶಾಲೆಯ ತರಗತಿಗಳನ್ನು ತೆಗೆದುಕೊಳ್ಳಬಾರದು ಎಂದು ಡಿಡಿಪಿಐ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ನದಿಪಾತ್ರದ ಶಾಲೆಗಳಿಗೆ ತುರ್ತು ಸ್ಥಿತಿಯಲ್ಲಿ ರಜೆ ಕೊಡುವಂತೆ ಎಲ್ಲಾ ಬಿಇಓ ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ