ತಂದೆಯನ್ನೇ ಕೊಲೆ ಮಾಡಿಸಿದ ಮಕ್ಕಳು !

Kannada News

21-07-2017

ಬೆಳಗಾವಿ: ಮಗಳ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಅಪ್ಪನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಗ, ಮಗಳು ಹಾಗೂ ಅಮ್ಮ ಸೇರಿ ಸುಪಾರಿ ನೀಡಿ, ಕೊಲೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಂಚಪ್ಪ ನೆಗೀನಾಳ (೫೦) ಮೃತ ವ್ಯಕ್ತಿ. ಜಿಲ್ಲೆಯ ಗೋಕಾಕ್ ತಾಲ್ಲೂಕಿನ, ಕೈತನಾಳ, ಹೊಸುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೆಂಚಪ್ಪ ಅವರನ್ನು ಹತ್ಯೆ ಮಾಡಿ, ಗೋಕಾಕ್ ಹೊರ ವಲಯದ ಬೆಟ್ಟದಲ್ಲಿ ಶವವನ್ನು ದುಷ್ಕರ್ಮಿಗಳು ಅಡಗಿಸಿಟ್ಟಿದ್ದರು. ಸುಪಾರಿ ಹತ್ಯೆ ಪ್ರಕರಣವನ್ನು೧೫ ದಿನಗಳಲ್ಲೇ  ಭೇದಿಸಿದ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ, ಶವ ಹೊರ ತಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೇವಲ ೭೦ ಸಾವಿರ ರೂಪಾಯಿ ಹಣದಾಸೆಗೆ, ಸುಪಾರಿ ಪಡೆದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.  ಇನ್ನು ಪ್ರಕರಣ ಸಂಬಂಧ ೬ ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರು ಜನರ ಪೈಕಿ ಮೃತ ವ್ಯಕ್ತಿಯ ಪತ್ನಿ, ಮಗ ಹಾಗೂ ಮಗಳು ಪ್ರಮುಖ ಆರೋಪಿಗಳಾಗಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ