ಟ್ವೀಟ್ ಮೂಲಕ ಅಸಮಾಧಾನ !

Kannada News

20-07-2017

ಬೆಂಗಳೂರು: ಕಾರಾಗೃಹದ ಡಿಐಜಿ ಹುದ್ದೆಯಿಂದ ವರ್ಗಾವಣೆ ಮಾಡಿರುವ, ರಾಜ್ಯ ಸರ್ಕಾರದ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್‍ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವೀಟರ್‍ ನಲ್ಲಿ ತಮಗಾದ ಅನ್ಯಾಯವನ್ನು ಅಮೇರಿಕದ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. 'ಎಲ್ಲೆಡೆ ಅನ್ಯಾಯವೇ ಇರುವಾಗ...ನ್ಯಾಯಕ್ಕೆ ಬೆದರಿಕೆ ಇರುತ್ತೆ' ಎಂಬುದನ್ನು ಹಂಚಿಕೊಂಡಿದ್ದಾರೆ. ಬಂಧೀಖಾನೆ ಡಿಐಜಿ ಹುದ್ದೆಯಿಂದ ವರ್ಗಾವಣೆ ಮಾಡಿದ ಮೊದಲ ಬಾರಿಗೆ ರೂಪಾ ಅವರು ಟ್ವೀಟ್ ಮೂಲಕ ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಟ್ವೀಟ್ ಮೂಲಕ ಅಸಮಾಧಾನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ