ಯಡಿಯೂರಪ್ಪ ಮೊದಲು ಸಂವಿಧಾನ ಓದಲಿ !

Kannada News

20-07-2017

ಧಾರವಾಡ: ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನುತ್ತಿದೆ, ಆದರೆ ಉದ್ಯಮಿಗಳ ಸಾಲ‌ ಮನ್ನಾ ಮಾಡೋಕೆ ಈ ಪ್ರಶ್ನೆ ಬರೋದೆ ಇಲ್ಲ ಎಂದು ಧಾರಾಡದಲ್ಲಿ, ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ‌ ಕೇಂದ್ರ ಸರ್ಕಾರ ರೈತಪರ ಸರ್ಕಾರ ಅಲ್ಲ, ನೀವು ಸಾಲ ಮನ್ನಾ ಮಾಡಿ, ನಾವೂ ಸಾಲ ಮನ್ನಾ ಮಾಡಿಸ್ತೇವೆ ಅಂದವರು, ಈಗ ಸುಮ್ಮನಿದ್ದಾರೆ ಎಂದು, ಹೆಸರು ಹೇಳದೆಯೇ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ವಿಷಯದ ಬಗ್ಗೆ ನಂತರ ನೋಡೋಣ ಎಂದ ಅವರು, ಇಂದಿರಾ ಕ್ಯಾಂಟಿನಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಮಾಡಿರುವ ಅರೋಪಕ್ಕೆ ಉತ್ತರ ನೀಡಿದರು.  ಇನ್ನೂ ಕ್ಯಾಂಟೀನ್ ಆರಂಭವೇ ಆಗಿಲ್ಲ, ಆಗಲೇ ವಿರೋಧ ಮಾಡುತ್ತಿದ್ದಾರೆ, ಕುಣಿಯೋಕೆ ಆಗದವರು ನೆಲ‌ಡೊಂಕು ಅನ್ನುವ ಹಾಗೆ, ವಿರೋಧ ಪಕ್ಷದವರು ಆಡ್ತಾ ಇದ್ದಾರೆ ಎಂದರು. ಇನ್ನು ರಾಜ್ಯಕ್ಕೆ ಪ್ರತ್ಯೇಕ ಧ್ವಜ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ರಾಜ್ಯಗಳ ಒಕ್ಕೂಟ ವ್ಯವಸ್ಥೆಯೇ ಬೇರೆ, ರಾಷ್ಟ್ರಗೀತೆ ಇದ್ದಾಗಲೂ ನಾಡಗೀತೆ ಇಲ್ಲವೇ? ಹಾಗೆಯೇ ಪ್ರತ್ಯೇಕ ಧ್ವಜ ಬೇಕು ಅಂತಿದ್ದೇವೆ, ಈ ವಿಷಯದಲ್ಲಿ ಯಡಿಯೂರಪ್ಪ ಮೊದಲು ಸಂವಿಧಾನ ಓದಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಜಲೈ ೨೧ ರಿಂದ ೨೩ರವರೆಗೆ ದಾದಾ ಸಾಹೇಬ್ ಅಂಬೇಡ್ಕರ್ ಅವರ ೧೨೬ನೇ ಜಯಂತಿ ಪ್ರಯುಕ್ತ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಿದ್ದೇವೆ, ದೇಶ-ವಿದೇಶದ ಭಾಷಣಕಾರರು ಬರುತ್ತಾರೆ, ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯುತ್ತಿದ್ದು, ನಾಳೆ ಕಾರ್ಯಕ್ರಮ ಉದ್ಘಾಟನೆಗೆ ರಾಹುಲ್ ಗಾಂಧಿ ಬರಲಿದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ