ಮೈಸೂರು ದಸರಾ ಭರ್ಜರಿ ಸಿದ್ಧತೆ

Kannada News

20-07-2017

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2107ಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಆನೆಗಳ ಪಟ್ಟಿ ಸಿದ್ದಪಡಿಸಿದ ಅರಣ್ಯ ಇಲಾಖೆ, ಈ ಬಾರಿಯೂ ಅಂಬಾರಿ ಹೊತ್ತು ಸಾಗುವ ಜವಬ್ದಾರಿ ಅರ್ಜುನನಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ದಸರಾಗೆ ಹೆಚ್ಚುವರಿಯಾಗಿ ನಾಲ್ಕು ಆನೆಗಳು ಬರಲಿವೆ ಎಂದೂ ತಿಳಿದು ಬಂದಿದೆ. 12 ಆನೆಗಳ ಬದಲಿಗೆ 16 ಆನೆಗಳನ್ನು ದಸರಾಗೆ ಕರೆತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿಗೆ ಪತ್ರ ಬರೆದಿರುವ ಮೈಸೂರು ಅರಣ್ಯಧಿಕಾರಿಗಳು, ದಸರಾದಿಂದ ದೂರ ಉಳಿದಿದ್ದ ಆನೆಗಳಿಗೂ ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ ಎಂದಿದ್ದಾರೆ. ಇದೀಗ ಆನೆಗಳ ಸಂಭಾವ್ಯ ಪಟ್ಟಿ ಲಭ್ಯವಾಗಿದ್ದೂ, ಅರ್ಜುನ, ಅಭಿಮನ್ಯು, ಬಲರಾಮ, ವಿಕ್ರಮ, ಗಜೇಂದ್ರ, ಹರ್ಷ, ಪ್ರಶಾಂತ, ಗೋಪಿ, ಗೋಪಾಲಕೃಷ್ಣ, ಕಾವೇರಿ, ಇವುಗಳ ಜೊತೆಯಲ್ಲಿ 3 ಹೊಸ ಆನೆಗಳು ಆಗಮಿಸಲಿವೆ ಎಂದಿದ್ದಾರೆ. ವಯಸ್ಸಾಗಿರುವ ಕಾರಣ ದಸರಾದಿಂದ ದೂರವಿಟ್ಟಿದ್ದ ವರಲಕ್ಷ್ಮಿ, ಸರಳಾಗೆ ಈ ಬಾರಿ ಮತ್ತೆ ಸ್ಥಾನ ದೊರೆಯಲಿದೆ. ಕೃಷ್ಣ, ಭೀಮ, ದ್ರೋಣ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಮೈಸೂರು ಮೈಸೂರು ದಸರಾ ಸಿದ್ಧತೆ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ