ಪೊಲೀಸರ-ವೈದ್ಯರ ನಿರ್ಲಕ್ಷ್ಯ ವ್ಯಕ್ತಿ ಬಲಿ !

Kannada News

20-07-2017

ಬೆಂಗಳೂರು: ಪೊಲೀಸರು ಮತ್ತು ವೈದ್ಯರ ನಿರ್ಲಕ್ಷ್ಯ ಆರೋಪದಿಂದ ರೋಗಿಗಳು ಶವದ ಮಧ್ಯೆ ಇಡೀ ರಾತ್ರಿ ಕಳೆದಿರುವ ಘಟನೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಯಲಹಂಕದ ಬಸ್ ನಿಲ್ದಾಣದ ಬಳಿ ದೇವರಾಜ್ ಎಂಬ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ನರಳಾಡುತ್ತಾ ಬಿದ್ದಿದ್ದನ್ನು ಕಂಡ ಸಾರ್ವಜನಿಕರು, ರಾತ್ರಿ ಯಲಹಂಕ ಆಸ್ಪತ್ರೆಗೆ ಕರೆ ತಂದಿದ್ದರು. ದೇವರಾಜನ ಸ್ಥಿತಿ ಗಂಭೀರವಾಗಿದ್ದರಿಂದ ವಾರಸುದಾರರಿಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನೀಡದೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಕೂಡ ವಾರಸುದಾರರಿಲ್ಲ ಎಂದು ದಾಖಲಿಸಿಕೊಳ್ಳದೇ ಮತ್ತೆ ಯಲಹಂಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಷ್ಟರಲ್ಲಾಗಲೇ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರಿಂದ ದೇವರಾಜ್ ಯಲಹಂಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ರೋಗಿ ದೇವರಾಜ್ ಮೃತಪಟ್ಟ ನಂತರ ಪೊಲೀಸರ ಸಹಿ ಇಲ್ಲದೆ ಶವವನ್ನು ಶವಾಗಾರಕ್ಕೆ  ಸಾಗಿಸಲು  ವೈದ್ಯರು ಒಪ್ಪಲಿಲ್ಲವೆಂದು ತಿಳಿದುಬಂದಿದೆ. ಆದರೆ ರಾತ್ರಿಯಿಡೀ ಕಾಯುತ್ತಾ ಕುಳಿತರೂ ಪೊಲೀಸರು ಬರದ ಹಿನ್ನಲೆಯಲ್ಲಿ ಶವ ದುರ್ವಾನೆ ಬರಲಾರಂಭಿಸಿದೆ. ನಂತರ ಬಂದ ಪೊಲೀಸರು ಶವವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶವದ ವಾಸನೆಯಿಂದ ಬೇಸತ್ತ ಜೀವಂತ ರೋಗಿಗಳು ಹಾಗೂ ಸಾರ್ವಜನಿಕರು ಯಲಹಂಕ ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ