ಅತ್ಯಾಚಾರ: ಕುಸ್ತಿ ಪಟುಗಳ ಬಂಧನ !

Kannada News

20-07-2017

ನವದೆಹಲಿ: ಹದಿನಾರರ ಹರೆಯದ ಕಬಡ್ಡಿ ಆಟಗಾತಿಯ ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಮತ್ತಿಬ್ಬರು ಕುಸ್ತಿ ಪಟುಗಳನ್ನ ಬಂಧಿಸಿದ್ದಾರೆ. ನೆನ್ನೆ, ಉತ್ತರ ದಿಲ್ಲಿಯ ಮಾಡೆಲ್‌ ಟೌನ್‌ ಪೊಲೀಸರು ಪ್ರಮುಖ ಆರೋಪಿ ಕುಸ್ತಿಪಟು ನರೇಶ್‌ ದಹಿಯಾ ಎಂಬಾತನನ್ನ ಬಂಧಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಕಾರಣದಿಂದ ಮತ್ತಿಬ್ಬರು ಕುಸ್ತಿಪಟುಗಳನ್ನ ಬಂಧಿಸಲಾಗಿದೆ. ಒಂದು ವಾರದ ಬಳಿಕ ಸಂತ್ರಸ್ತ ಬಾಲಕಿಯು ಪೊಲೀಸರಿಗೆ ದೂರು ನೀಡಿದ್ದಳು. ಸಂತ್ರಸ್ತೆ ತನ್ನ ದೂರಿನಲ್ಲಿ "ಆರೋಪಿ ದಹಿಯಾ ತಾನು ಸ್ಟೇಡಿಯಂ ಅಧಿಕಾರಿ ಎಂದು ಕಳೆದ ಜು.9ರಂದು ನನ್ನಲ್ಲಿ ಪರಿಚಯಿಸಿಕೊಂಡಿದ್ದಾನೆ. ಈ ವೇಳೆ ಅತ್ಯಾಚಾರ ಎಸಗಿದ್ದು, ಬಳಿಕ ಆತ ನನ್ನನ್ನು, ಸ್ಟೇಡಿಯಂ ಹೊರಗಿನ ರಸ್ತೆಯಲ್ಲಿ ಬಿಟ್ಟು, "ರೇಪ್‌ ಬಗ್ಗೆ ಯಾರಿಗಾದರೂ ಹೇಳಿದರೆ ಕೊಂದೇ ಬಿಡುತ್ತೇನೆ' ಎಂದು ಬೆದರಿಕೆ ಹಾಕಿದ್ದಾನೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಬಂಧಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ