ಭಾರೀ ಮಳೆ: ಸೇತುವೆಗಳ ಮುಳುಗಡೆ !

Kannada News

20-07-2017

ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯದ, ಕೃಷ್ಣಾ ನದಿಯ ಒಳ ಹರಿವು ಹೆಚ್ಚಾಗಿದ್ದೂ, ಚಿಕ್ಕೋಡಿ ತಾಲ್ಲೂಕಿನ 6 ಬ್ರಿಡ್ಜ್ ಕಂ ಬ್ಯಾರೇಜ್ ಗಳು ಮುಳುಗಡೆಯಾಗಿವೆ. ವೇದಗಂಗಾ ನದಿಮೇಲಿನ, ಜತರಾಟ, ಭೀವಶಿ, ಸಿದ್ದನಾಳ,ಅಕ್ಕೋಳ, ಭೋಜವಾಡಿ, ಕುನ್ನೂರ ಬ್ರಿಡ್ಜ್ ಕಂ ಬ್ಯಾರೇಜ್ ಗಳು ಮುಳುಗಡೆಯಾಗಿವೆ. ಅಲ್ಲದೇ ದೂಧ್‌ ಗಂಗಾ ನದಿಮೇಲಿನ ಕಾರದಗಾ, ಭೋಜ, ಮತ್ತು ಮಲಿಕವಾಡ, ದತ್ತವಾಡ ಮುಳುಗಡೆಯಾಗಿವೆ. ಕೃಷ್ಣಾ ನದಿಯ,ಯಡುರ-ಕಲ್ಲೊಳ ಗ್ರಾಮಗಳ ನಡುವಿನ ಸೇತುವೆ ಮಳೆ    ನೀರಿನಿಂದ ತುಂಬಿಹೋಗಿದ್ದೂ ಸಂಪರ್ಕ ಕಡಿತಗೊಂಡಿದೆ. ಚಿಕ್ಕೋಡಿ ತಾಲ್ಲೂಕಿನ ಒಟ್ಟು ೬  ಸೇತುವೆಗಳು  ಮಳೆಯಿಂದ ಮುಳುಗಡೆಯಾಗಿವೆ.

ಇನ್ನು ಕೊಡಗಿನಲ್ಲೂ ಮಳೆಯ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಸಿದ್ದಾಪುರ ಕರಡಿಗೋಡು ಭಾಗದಲ್ಲಿ, ಕಾವೇರಿ ನದಿ ನೀರಿನ ಹರಿವು ಹೆಚ್ಚುತ್ತಿದ್ದೂ, ಮುಂಜಾಗ್ರತಾ ಕ್ರಮವಾಗಿ ಸಿದ್ದಾಪುರದ ನದಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ.  ಸುಮಾರು ೧೮೦ ಕಟುಂಬಗಳಿಗೆ ನೋಟಿಸ್ ನೀಡಿರುವ ಜಿಲ್ಲಾಡಳಿತ, ನದಿ ನೀರು ಹೆಚ್ಚಳವಾಗುತ್ತಿದ್ದೂ, ಸುರಕ್ಷಿತ  ಸ್ಥಳಗಳಿಗೆ ತೆರಳುವಂತೆ ಗ್ರಾಮಸ್ಥರಿಗೆ ಸೂಚಿಸಿದೆ. ಅಷ್ಟೇ ಅಲ್ಲದೇ, ಕರಡಿಗೋಡು ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಮುಂದಾಗಿದೆ. ಸ್ಥಳಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಂಜಿ ಕೇಂದ್ರ ತೆರೆಯಲು ಸೂಚಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ