ಕಳಸಾ ಹೋರಾಟ: ಆಮರಣಾಂತ ಉಪವಾಸ

Kannada News

19-07-2017

ಗದಗ: ಕಳಸಾಬಂಡೂರಿ-ಮಹದಾಯಿ ಯೋಜನೆ ಜಾರಿ ವಿಚಾರ ಆಮರಣಾಂತ ಉಪವಾಸ ಕೈಗೊಂಡಿರುವ ವಿರೇಶ್ ಸೊಬರದಮಠ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ ಮೂರುದಿನಗಳಿಂದಲೂ ಉಪವಾಸ ಕೈಗೊಂಡಿರುವ ವೀರೇಶ್ ಅವರು, ಆಹಾರ ನೀರಿಲ್ಲದೇ ಬಳಲಿದ್ದೂ ಆರೋಗ್ಯದಲ್ಲಿ ಏರುಪೇರು ಕಂಡಿದೆ. ಪ್ರತಿಭಟನಾ ನಿರತ ವಿರೇಶ್ ಗ್ಲುಕೋಸ್ ಪಡೆಯುತ್ತಾ ವೇದಿಕೆಯ ಮೇಲೆಯೇ ವಿಶ್ರಮಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಪ್ರತಿಭಟನಾ ಸ್ಥಳಕ್ಕೆ ಶಾಸಕ ಎನ್ ಹೆಚ್ ಕೋನರೆಡ್ಡಿ ಭೇಟಿ ನೀಡಿದ್ದಾರೆ. ಉಪವಾಸ ಕೈಬಿಡುವಂತೆ ಯಾರೆಲ್ಲ ಹೇಳಿದರೂ ನಿರಾಕರಿಸಿದ ಅವರು, ಪ್ರತಿಭಟನೆ ಮುಂದುವರಿಸಿದ್ದಾರೆ. ಯೋಜನೆ ಜಾರಿಗಾಗಿ ಸರ್ಕಾರಗಳಿಂದ ಸೂಕ್ತ‌ನಿಲುವು ಪ್ರಕಟವಾಗುವವರೆಗೂ ಉಪವಾಸ ಕೈಬಿಡುವುದಿಲ್ಲ ಎಂದು ವಿರೇಶ್ ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ಹಲವಾರು ರೈತರು ಬೀಡುಬಿಟ್ಟಿದ್ದೂ, ರೈತಮುಖಂಡರಿಂದ ವಿರೇಶ್ ಸೊಬರದಮಠ ಅವರಿಗೆ ಉಪಚಾರ ನೀಡಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

ಗದಗ ಕಳಸಾ ಯೋಜನೆ ಆಮರಣಾಂತ ಉಪವಾಸ  


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ