ಇದು ಗೋವಾ ಸರ್ಕಾರದ ಉದ್ದಟತನ !

Kannada News

19-07-2017

ಬೆಂಗಳೂರು: ಮಹದಾಯಿ ನದಿ ನೀರು ವಿಚಾರಕ್ಕೆ ಗೋವಾ ಸಚಿವ ನೀಡಿರುವ ಹೇಳಿಕೆ ಸಿಎಂ ಸಿದ್ದರಾಮಯ್ಯ, ಇದು‌ ಸಚಿವರು ಹಾಗೂ ಗೋವಾ ಸರ್ಕಾರದ ಉದ್ದಟತನ ಎಂದಿದ್ದಾರೆ. ನ್ಯಾಯಾಧೀಕರಣದಿಂದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಹೇಳಲಾಗಿತ್ತು. ಹೀಗಾಗಿ‌ ಮಾತುಕತೆ ಮೂಲಕ‌ ಬಗೆಹರಿಸಿಕೊಳ್ಳಲು ಗೋವಾ ಸಿಎಂಗೆ ಪತ್ರ ಬರೆದಿದ್ದೆ, ಆದರೆ ಗೋವಾ ಸಿಎಂ ಗೆ ಪತ್ರಬರೆದಿದ್ದರೆ, ನೀರಾವರಿ ಸಚಿವ ಉತ್ತರ ನೀಡಿದ್ದಾರೆ. ಪ್ರಕರಣ ಸೌಹಾರ್ದಯುತವಾಗಿ ಇತ್ಯರ್ಥ ಆಗಬೇಕು ಅನ್ನೋ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದೆ. ಆದರೆ ಆಕ್ಷೇಪ ಪದ ಬಳಕೆ‌ ಗೌರವ ತರುವಂತದ್ದಲ್ಲ ಎಂದರು. ಒಕ್ಕೂಟ ವ್ಯವಸ್ಥೆಯಲ್ಲಿ ಪದ ಬಳಕೆ ಹೇಗೆ ಮಾಡಿಕೊಳ್ಳಬೇಕು ಅನ್ನೋದನ್ನು ಅಲ್ಲಿನ ಸಚಿವರು ತಿಳಿದುಕೊಳ್ಳಲಿ ಎಂದು ಗೋವಾ ಸಚಿವರಿಗೆ ಸಿಎಂ ತಿರುಗೇಟು ನೀಡಿದ್ದಾರೆ. ಮಹಾದಾಯಿ ವಿಚಾರವಾಗಿ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಈಗ ಮತ್ತೊಮ್ಮೆ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ, ಬಿಜೆಪಿಯವರು ಹೋಗಿ ಪ್ರಧಾನಮಂತ್ರಿಗಳಿಗೆ ಹೇಳಲಿ, ಮಧ್ಯಸ್ಥಿಕೆ ಮಾಡಲು ಒಪ್ಪಿಸಲಿ ಎಂದು ಬಿಜೆಪಿಗೆ ಟಾಂಗ್ ನೀಡಿದ‌ರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ